ಯರಗಟ್ಟಿ

ಅಕ್ರಮ ಸಾರಾಯಿ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಅಕ್ರಮ ಸಾರಾಯಿ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಲೋಕದರ್ಶನ ವರದಿ 


ಯರಗಟ್ಟಿ : ಗೋಕಾಕ ರಸ್ತೆ ಜಕಾತಿ ಪಿಯು ಕಾಲೇಜು ಹತ್ತಿರ ಕಾರಿನಲ್ಲಿಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. 


ರಾಮದುರ್ಗ ಅಬಕಾರಿ ಉಪ ಅಧೀಕ್ಷಕರ  ಮಾರ್ಗದರ್ಶನದಲ್ಲಿ  ಯರಗಟ್ಟಿ-ಗೋಕಾಕ ರಾಜ್ಯ ಹೆದ್ದಾರಿ 45 ರಸ್ತೆಯಲ್ಲಿ ರಸ್ತೆಗಾವಲು ನಡೆಸುತ್ತಿರುವಾಗ 4 ಚಕ್ರದ ಮಾರುತಿ ಆಲ್ಲೊ ವಾಹನವನ್ನು ಶೋಧನೆ ಮಾಡಿದಾಗ 25 ಬಾಕ್ಸಗಳಲ್ಲಿ 90 ಎಮ್‌.ಎಲ್ ನ ಓರಿಜಿನಲ್ ಚಾಯ್ಸ್‌ ವಿಸ್ಕಿಯ 2400 ಟೆಟ್ರಾ ಪ್ಯಾಕೇಟಗಳು (216 ಲೀ) ಕಂಡು ಬಂದಿದೆ. 


ಅಂದಾಜು 300000 ರೂ. ಮೌಲ್ಯದ ವಾಹನ ಹಾಗೂ 84,312 ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದು ಅಬಕಾರಿ ನೀರೀಕ್ಷಕ ಮಹೇಶ ಪುಟಾಣಿ ರಾಮದುರ್ಗ ಉಪ ವಿಭಾಗ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಆರೋಪಿಯನ್ನು ಬಂಧಿಸಲಾಗಿದೆ. 


ಸುದ್ದಿ ಓದಿ