ಸಂಕೇಶ್ವರ

ಜಿಲ್ಲೆಯ ರಾಜಕಾರಣದಲ್ಲಿ ಹೊಸ ಸಂಚಲನ ?

ಜಿಲ್ಲೆಯ ರಾಜಕಾರಣದಲ್ಲಿ ಹೊಸ ಸಂಚಲನ ?

ಎಂ.ಬಿ.ಘಸ್ತಿ  

ಸಂಕೇಶ್ವರ: ಬೆಳಗಾವಿ ಜಿಲ್ಲೆಯ ಕಾಂಗ್ರೇಸ್ ಮತ್ತು ಬಿಜೆಪಿ ಶಾಸಕರ ರಾಜಕಾರಣ ಧೃವೀಕರಣ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಕಾಂಗ್ರೇಸ್‌ನವರು ಬಿಜೆಪಿಗೆ ಹಾಗೂ ಬಿಜೆಪಿಯ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ವಲಸೆ ಹೋಗುವ ಸೂಚನೆಗಳು ದಟ್ಟವಾಗಿ ಕಂಡು ಬರುತ್ತಿವೆ ಎಂದು ಬೆಳಗಾವಿ ಜಿಲ್ಲೆಯ ರಾಜಕೀಯ ವಿಶ್ಲೇುಶಕರ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ ಎಂದು ತಿಳಿದುಬಂದಿದೆ.   

ಮಹಾನಾಯಕರ ಹಿಂದೆ ಶಾಸಕರ ದಂಡು ಬಿಜೆಪಿ ಪಕ್ಷಕ್ಕೆ ಹೋಗುವರಿದ್ದಾರೆಂದು ಇದರಂತೆಯೇ ಬಿಜೆಪಿ ಪಕ್ಷವನ್ನು ತೊರೆದು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಹೋಗುವರಿದ್ದಾರೆಂದು ನಂಬಲರ್ಹವಾದ ಮೂಲಗಳಿಂದ ತಿಳಿದುಬಂದಿದೆ. ಜಿಲ್ಲೆಯ ಎರಡೂ ಪಕ್ಷದ ಕಾರ್ಯಕರ್ತರಲ್ಲಿ ದ್ವಂದ್ವ ನಿಲುವು ಮೂಡಿದೆ. ಜಿಲ್ಲೆಯಲ್ಲಿ  ರಾಜಕೀಯ ವಾತಾವರಣ ಕುತೂಹಲಕರವಾಗಿದೆ.  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎರಡೂ ಪಕ್ಷಗಳು ಪೈಪೋಟಿಗಿಳಿದಿವೆ.   

ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದ ಬಿಜೆಪಿಯ ಮಾಜಿ ಸಂಸದ ರಮೇಶ ವಿಶ್ವನಾಥ ಕತ್ತಿ ಇವರು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಇವರ ಮುಖಂಡತ್ವದಲ್ಲಿ ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.   

ಬಿಜೆಪಿಯ ಮುಖಂಡರು ವರಿಷ್ಠರು ರಮೇಶ ಕತ್ತಿ ಅವರಿಗೆ ಬೇಗನೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಹೇಳಿದ್ದಾರೆನ್ನಲಾಗಿದೆ.  ರಮೇಶ ಕತ್ತಿ ಇವರ ಆಪ್ತರಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮಾಜಿ ಸಚಿವ ಹಾಗೂ ಶಿಕ್ಷಕರ ಪದವೀಧರ ಕ್ಷೇತ್ರದ ಚುನಾಯಿತಗೊಂಡ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಇವರು ಸಹಿತ ರಮೇಶ ಕತ್ತಿ ಇವರಿಗೆ ಬೆಂಬಲ ನೀಡಬಹುದು.  ಈಗ ಸದ್ಯ ರಮೇಶ ಕತ್ತಿ ಅವರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ನಿಗೂಢ ಹಾಗೂ ಜಾಣ ನಡೆ ಯಾರಿಗೂ ಗೊತ್ತಾಗುತ್ತಿಲ್ಲ.  

ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಸತೀಶ ಜಾರಕಿಹೊಳಿ ಅವರು ತಮ್ಮ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಇವರನ್ನು ಆಖಾಡಾಕ್ಕೆ ಇಳಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.  ಚಿಕ್ಕೋಡಿ ಲೋಕಸಭೆಯ ಅಭ್ಯರ್ಥಿಯಾಗಿ ಅಥಣಿ ಶಾಸಕ ಲಕ್ಷ್ಮಣ ಸವದಿ ಇವರ ಪುತ್ರರನ್ನು ಇಳಿಸಲು ಸನ್ನದ್ಧರಾಗಿದ್ದಾರೆಂದು ತಿಳಿದು ಬಂದಿದೆ. 


ಸುದ್ದಿ ಓದಿ