ದೀಪವು ಜ್ಞಾನದ ಸಂಕೇತ: ತೊರಗಲ್ಲಮಠದ ಸ್ವಾಮೀಜಿ
ಯರಗಟ್ಟಿ 16: ದೀಪವು ಜ್ಞಾನದ ಸಂಕೇತವಾಗಿದ್ದು. ಜಗತ್ತಿನ ಕತ್ತಲೆ ಕಳೆಯಲು ಸೂರ್ಯನುದಯಿಸುವಂತೆ ಪ್ರತಿಯೊಬ್ಬರ ಮನದ ಅಂಧಕಾರ ಕಳೆಯಲು ಜ್ಞಾನದ ಮತ್ತು ಧರ್ಮದ ಬೆಳಕು ಅವಶ್ಯವಾಗಿದೆ ಎಂದು ತೊರಗಲ್ಲಮಠದ ದೀಪಕ ಸ್ವಾಮೀಜಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದಲ್ಲಿ ಬಲಿಪಾಡ್ಯಮಿ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿನ ಅಂಧರು, ಅನಾಥರು, ನಿರ್ಗತಿಕರು, ಬಡವರು, ರೋಗಿಗಳ ಕಣ್ಣಿರೊರಸಿ ಅವರ ಬದುಕಿಗೆ ಬೆಳಕಾಗುವ ಕಾರ್ಯ ದೀಪ ಬೆಳಗಿದಷ್ಟೆ ಶ್ರೇಷ್ಟ. ದೇಗುಲಗಳು ಶಾಶ್ವತವಾದ ನಂದಾದೀಪವಿದ್ದಂತೆ. ಇಲ್ಲಿ ದೀಪ ದೀಪದಿಂದ ಬೆಳಗಿಸುವ ಜತೆಗೆ ಮನಸ್ಸಿನ ಮನಸ್ಸನ್ನು ಬೆಳಗುವ ಧರ್ಮ ಮತ್ತು ಆಧ್ಯಾತ್ಮದ ದೀಪ ಬೆಳಗಿಸಿಕೊಳ್ಳಬೇಕು ಎಂದರು.
ಬಿಡಿಸಿಸಿ ಬ್ಯಾಂಕ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ದೀಪಾವಳಿ ಹಬ್ಬವನ್ನು ಹಿಂದೂ ಧರ್ಮದ ಪ್ರತಿಯೊಂದು ಧರ್ಮ ಜನಾಂಗದವರು ಆಚರಿಸುವ ಮೂಲಕ ಜಾಗತೀಕರಣದ ಜಗತ್ತಿಗೆ ಒಳ್ಳೆಯ ಕಾಣಿಕೆಯನ್ನು ನೀಡುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಹಬ್ಬದ ಹಿನ್ನಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಮನೆಗಳು ವಿದ್ಯುತ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ಮನೆಗಳ ಮುಂದೆ ವಿಶೇಷ ಪೂಜೆಗಳು ಆಕಾಶ ಬುಟ್ಟಿಗಳು ದೀಪದ ಸಾಲುಗಳು ಹಬ್ಬದ ಸಂಭ್ರಮ ಕಿಚ್ಚು ಹೆಚ್ಚಿಸಿದ್ದವು.
ಸಾನ್ನಿದ್ಯ ಹಿರೇಮಠದ ಶೀವಲಿಂಗಯ್ಯ ಸ್ವಾಮಿಜಿ, ಸವದತ್ತಿ ಯಲ್ಲಮ್ಮ ವ್ಯವಸ್ಥಾಪನಾ ಸಮೀತಿ ಸದಸ್ಯ ಪುಂಡಲೀಕ ಮೇಟಿ ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಮಹಾರುದ್ರ್ಪ ಉಪ್ಪಿನ, ಕೆ.ಕೆ.ಪೂಣೆದ, ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ, ಮಹಾದೇವ ಶಿವಪೂಜಿ, ಎ.ವಿ.ಇಂಗಳೆ, ಆನಂದ ಲಕ್ಕನ್ನವರ, ಬಸವರಾಜ ಸರದಾರ, ಸುಭಾನಿ ಕುದರಿ, ವಿನಯ ಪಾಟೀಲ, ರಾಜು ಬಾರ್ಕಿ, ಉಮೇಶ ಹೊಸವಾಳ, ಮೆಹಬುಬ್ ಆನಿ, ಪ್ರಶಾಂತ ಸರದಾರ, ಕಿರಣ ಶಿವನಗೌಡರ, ಕಮಾಲಸಾಬ ಜಮಾದಾರ ಸೇರಿದಂತೆ ಇತರರು ಇದ್ದರು,