ಕಾರವಾರ

ದಾಂಡೇಲಿಯಲ್ಲಿ ಮೊಸಳೆ ದಾಳಿ ಕೂಲಿ ಕಾರ್ಮಿಕನೊಬ್ಬ ತೀವ್ರವಾಗಿ ಗಾಯ

ದಾಂಡೇಲಿಯಲ್ಲಿ ಮೊಸಳೆ ದಾಳಿ ಕೂಲಿ ಕಾರ್ಮಿಕನೊಬ್ಬ ತೀವ್ರವಾಗಿ ಗಾಯ

ಲೋಕದರ್ಶನ ವರದಿ 

ದಾಂಡೇಲಿ ಮೆ 16 : ದಾಂಡೇಲಿಯ ಕೋಗಿಲಬನ (ಬಡಾಕಾನಶಿರಡಾ) ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲಭಾವಿ ಗ್ರಾಮದ ಸಮೀಪದ ಕಾಳಿನದಿಯಲ್ಲಿ ಮತ್ತೇ ಮೊಸಳೆ ದಾಳಿ ಸಂಭವಿಸಿದ್ದು ಕೂಲಿ ಕಾರ್ಮಿಕನೊಬ್ಬ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಕಲಭಾವಿ ನಿವಾಸಿ ವಿಠ್ಟು ಬಾಗು ಕರತ್, (65) ಎಂದು ಗುರುತಿಸಲಾಗಿದ್ದು ಅವರು ನದಿಯ ದಂಡೆಗೆ ನೀರು ಕುಡಿಯಲು ತೆರಳಿದ್ದ ವೇಳೆ ಮೊಸಳೆಯೊಂದು ಏಕಾಎಕಿ ದಾಳಿ ನಡೆಸಿ ಕೈಗೆ ಕಚ್ಚಿದೆ ಎನ್ನಲಾಗಿದೆ. ಸ್ಥಳೀಯರು ತಕ್ಷಣವೇ ಅವರನ್ನು ರಕ್ಷಿಸಿ ದಾಂಡೇಲಿಯ ಸಾರ್ವಜನಿಕ ಸರ್ಕಾರಿ  ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಮುಂದುವರೆದಿದೆ.  

ಘಟನೆಯ ಮಾಹಿತಿ  ತಿಳಿದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ. ಕಾಳಿ ನದಿಯಲ್ಲಿ ಇತ್ತಿಚಿನ ದಿನಗಳಲ್ಲಿ ಮೊಸಳೆಗಳ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗುತ್ತಿದೆ. ಕಳೆದ 15 ದಿನಗಳ ಅವಧಿಯಲ್ಲಿ ಮೊಸಳೆಯ ದಾಳಿಗೆ ವ್ಯಕ್ತಿಯೊಬ್ಬ ಗಾಯಗೊಂಡಿರುವ ಎರಡನೇ ಘಟನೆ ಇದಾಗಿದೆ. ಇದರಿಂದ ಗ್ರಾಮೀಣ ಭಾಗದ ಜನರು ನದಿ ತೀರಕ್ಕೆ ಹೋಗಲು ಭಯ ಪಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. 


ಸುದ್ದಿ ಓದಿ