ಮಾನವೀಯತೆ ಮೆರೆದ ಸಮಾಜ ಸೇವಕ: ಆನಂದಗೌಡ ದೊಡಮನಿ
ತಾಳಿಕೋಟಿ 06: ಹಗರಟಗಿ ಗ್ರಾಮದಿಂದ ತಾಳಿಕೋಟಿ ಪಟ್ಟಣಕ್ಕೆ ಬರುವ ಸಂದರ್ಭದಲ್ಲಿ ಬೈಕ ಸವಾರನೊಬ್ಬ ಎದುರಿಗೆ ಬರುವ ಬೈಕ್ಗೆ ಡಿಕ್ಕಿ ಹೊಡೆದು ರಕ್ತ-ಸಿಕ್ತನಾಗಿ ನರಳುತ್ತಿರುವಾಗ ಅದೇ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಎಬಿಡಿ ಫೌಂಡೇಶನ್ ಅಧ್ಯಕ್ಷ ಹಾಗೂ ಮುಖಂಡ ಆನಂದಗೌಡ ದೊಡಮನಿ ಅವರು ಬೈಕ್ ಸವಾರನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ತಮ್ಮ ನಿಸ್ವಾರ್ಥ ಸಮಾಜ ಸೇವಾ ಕಾರ್ಯಗಳಿಂದ ಇಗಾಗಲೇ ಬಡವರ ನೊಂದವರ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ಸಹಾಯವನ್ನು ಮಾಡುತ್ತಲೇ ಬಂದಿರುವ ಆನಂದಗೌಡ ದೊಡಮನಿಯವರು ಈ ಮಾನವೀಯತೆಯ ಕಾರ್ಯದಿಂದ ಮತ್ತೇ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.