ಜಮಖಂಡಿ

ಕೃಷ್ಣಾ ನದಿ ತೀರದ ಬಳಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

ಕೃಷ್ಣಾ ನದಿ ತೀರದ ಬಳಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

ಜಮಖಂಡಿ 11: ತಾಲೂಕಿನ ಚಿಕಪಡಸಲಗಿ ಶ್ರಮಬಿಂದು ಸಾಗರದ ಕೃಷ್ಣಾ ನದಿ ತೀರದ ಬಳಿ ಬೃಹತ್ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿದನ್ನು ಕಂಡು ಗ್ರಾಮಸ್ಥರು ಭಯ ಭೀತರಾಗಿದ್ದಾರೆ. 

ಬೇಸಿಗೆ ಬಿಸಿಲಿನಿಂದ ಕೃಷ್ಣಾ ನದಿಯಲ್ಲಿನ ನೀರು ಸಂಪೂರ್ಣವಾಗಿ ಬತ್ತಿರುವ ಹಿನ್ನಲೆ ನದಿಯಲ್ಲಿನ ಜಲಚರ ಪ್ರಾಣಿಗಳು ನೀರಿಗಾಗಿ ಅರಸಿಕೊಂಡು ಹೊರ ಬರುತ್ತಿವೆ. ಅದೇ ತರಹ ಮೊಸಳೆಯು ಬಿಸಿಲಿನ ತಾಪಕ್ಕೆ ನದಿಯ ದಡದ ಪಕ್ಕ ಕಾಣಿಸಿಕೊಂಡಿದ್ದು,  ಚಿಕಪಡಸಲಗಿ ಗ್ರಾಮಸ್ಥರು ಸೇರಿಕೊಂಡು ಬೃಹತ್ ಗಾತ್ರದ ಮೊಸಳೆಯನ್ನು ಶೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆಂದು ಮಾಹಿತಿ ತಿಳಿದು ಬಂದಿದೆ. 


ಸುದ್ದಿ ಓದಿ