ಪರಿಸರದ ಬಗ್ಗೆ ಕಾಳಜಿ ಮೂಡಿಸದಿದ್ದರೆ ಮುಂದೆ ಹೆಚ್ಚಿನ ಅಪಾಯ
ಇಂಡಿ 22: ಮಾನವನ ದುರಾಸೆಯಿಂದ ಪರಿಸರ ಹಾಳಾಗುತ್ತಿದ್ದು, ಇದು ಮಾನವನಿಂದಲೇ ಸರಿಯಾಗಬೇಕಿದೆ. ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸದಿದ್ದರೆ ಮುಂದೆ ಹೆಚ್ಚಿನ ಅಪಾಯ ಎದುರಾಗಲಿದೆ ಎಂದು ಎಸ್.ಎಸ್.ಪ್ಯಾರಾ ಮೇಡಿಕಲ್ ಕಾಲೇಜ ಅಧ್ಯಕ್ಷರಾದ ಎಸ್.ಬಿ,ಕೆಂಬೋಗಿ ಹೇಳಿದರು.
ಪಟ್ಟಣದ ಬಿಜಾಪುರ ರಸ್ತೆಯಲ್ಲಿರುವ ಎಸ್. ಎಸ್. ಪ್ಯಾರಾ ಮೇಡಿಕಲ್ ಕಾಲೇಜುನಲ್ಲಿ ಸಸಿಗೆ ನೀರು ಹಾಕುವ ಮುಖಾಂತರ ಪರಿಸರ ದಿನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಡಿದ ಅವರು ಪರಿಸರ ರಕ್ಷಣೆ ಮಾಡುವದು ಪ್ರತಿಯೊಬ್ಬರ ಜವಾಬ್ದಾರಿ ಯಾಗಿದೆ. ಪರಿಸರ ನಾಶ ಮಡುವುದರಿಂದ ನಮಗೆ ನಾವೆ ಬಲಿ ಪಶುಯಾಗುತ್ತಿದ್ದೆವೆ. ಪರಿಸರ ನಾಶ ಅಗುವುದರಿಂದ ಸರಿಯಾದ ಮಳೆ ಇಲ್ಲದೆ ಬೆಳೆಗಳನ್ನು ಬೆಳೆಯಲು ಅಸಾಧ್ಯವಾಗಿದೆ. ಜೀವನದಲ್ಲಿ ಪ್ರತಿಯೊಬ್ಬರು ಗಿಡಗಳ ರಕ್ಷಣೆ ಮಾಡುವದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಎಮ್.ಎಸ್. ಪಾಟೀಲ, ದನಯ್ಯ ಮಠಪತಿ, ಮಕ್ತುಮ ಮುಲ್ಲಾ, ನುಸ್ರತ್ ಹವಾಲದಾರ, ಡಾ. ಸುನೀಲಕುಮಾರ ಸರಸಂಬಿ, ಬಲರಾಮ, ಶ್ರೀಶೈಲ ಹುಗಾರ, ಉಪಸ್ಥಿತರಿದ್ದರು.