ಶಿಗ್ಗಾವ್

ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆಯವರಿಗೆ ಭವ್ಯ ಸ್ವಾಗತ

ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆಯವರಿಗೆ ಭವ್ಯ ಸ್ವಾಗತ

ಶಿಗ್ಗಾವಿ 12 : ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿಯಾಗಿಸುವ ಕಾರ್ಯಕ್ಕೆ ಕಂಕಣ ತೊಡಲು ನಮೋ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಯವರ ಜನ.ಗಣ.ಮನ ಬೆಸೆಯೋಣ ಎಂಬ ಬೈಕ್ ಯಾತ್ರೆಯು ಶಿಗ್ಗಾವಿ ಪಟ್ಟಣಕ್ಕೆ ಬುಧವಾರ ರಾ​‍್ಯಲಿ ಆಗಮಿಸಿದ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯರು ಆರತಿ ಬೆಳಗಿ ಭವ್ಯ ಸ್ವಾಗತ ಕೋರಲಾಯಿತು. 

ಬೈಕ್ ರಾ​‍್ಯಲಿಯು ಕೋಲಾರದಿಂದ ಆರಂಭಗೊಂಡಿದ್ದು ನಾಡಿನ ಉದ್ದಕ್ಕೂ ಸಂಚರಿಸುತ್ತಾ ಅಕ್ಟೋಬರ್ 14ರಂದು ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ. 

ರಾ​‍್ಯಲಿಯು ಪೋಷ್ಟ್‌ ಆಪೀಸ್ ರಸ್ತೆಯ ಮೂಲಕ ಹಾಯ್ದು ಪಿಎಲ್‌ಡಿ ಬ್ಯಾಂಕ್ ವೃತ್ತ, ಹಳೆ ಬಸ್ಟ್ಯಾಂಡ್ ಮೂಲಕ ಚನ್ನಮ್ಮ ಸರ್ಕಲ್ ಆಗಮಿಸಿ ಅಲ್ಲಿ ಚನ್ನಮ್ಮ ಮೂರ್ತಿಗೆ ಮಾಲಾರೆ​‍್ಣ ಮಾಡಿ ನಂತರ ಪ್ರವಾಸಿ ಮಂದಿರದ ಮೂಲಕ ಹಾಯ್ದು ಹಾವೇರಿಗೆ ಪ್ರಯಾಣ ಬೆಳೆಸಿದರು. 

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ಸಿದ್ದರಾಜ ಕಲಕೋಟಿ, ತಾಲೂಕಾ ಬಿಜೆಪಿ ಅದ್ಯಕ್ಷ ಶಿವಾನಂದ ಮ್ಯಾಗೇರಿ, ಮುಖಂಡರಾದ ಅರ್ಜುನ ಹಂಚಿನಮನಿ, ಡಾ. ಮಲ್ಲೇಶಪ್ಪ ಹರಿಜನ, ರೇಣುಕಗೌಡ ಪಾಟೀಲ, ಪ್ರತೀಕ ಕೋಳೆಕಾರ, ಅನಿಲ ಸಾತಣ್ಣವರ, ಸಂಜನಾ ರಾಯ್ಕರ್, ಯಲ್ಲಪ್ಪ ಶಿಂದೆ, ಹನುಮಂತಪ್ಪ ಗುಳೇದ, ಹನುಮಂತಪ್ಪ ಹರಿಜನ, ಮಂಜುನಾಥ ಮಿರ್ಜಿ, ಸಂತೋಷ ದೊಡ್ಡಮನಿ ಸೇರಿದಂತೆ ನಮೋ ಬ್ರಿಗೇಡ್ ಸದಸ್ಯರು ಹಾಗೂ ವಿವಿಧ ಮುಖಂಡರು ಇದ್ದರು. 


ಸುದ್ದಿ ಓದಿ