ನಿಲಗಾರ ಗಣಪತಿಗೆ ಭವ್ಯ ವಿದಾಯ
ಸಂಕೇಶ್ವರ 10: ನಿನ್ನೆ ರಾತ್ರಿ ನಿಲಗಾರ (ಹೆದ್ದೂರಶೆಟ್ಟಿ) ವಿಘ್ನ ನಿವಾರಕನ ಭವ್ಯ ಮೆರವಣಿಗೆಯೊಂದಿಗೆ ವಾದ್ಯ ಹಾಗೂ ಪಟಾಕಿಗಳ ಸದ್ದು ಮತ್ತು ಸಾವಿರಾರು ಭಕ್ತರು ಗಣೇಶ ಬಪ್ಪಾ ಮೋರಾ್ಯ ಮುಂದಿನ ವರ್ಷ ಬೇಗನೆ ಬಾ ನಮ್ಮೆಲ್ಲರ ಕಷ್ಟ ಕಾರ್ಪಣಯಗಳು ಹಾಗೂ ವಿಘ್ನಗಳನ್ನು ದೂರ ಮಾಡಬೇಕೆಂದು ಭಕ್ತರು ಕೋರಿ ವಿಘ್ನೇಶ್ವರನಿಗೆ ಅಂತಿಮವಾಗಿ ದರ್ಶನ ಪಡೆದುಕೊಂಡು ವಿದಾಯ ಹೇಳಿದರು.
ರಾತ್ರಿ 1.30 ಗಂಟೆಗೆ ಹಿರಣ್ಯಕೇಶಿ ನದಿಯಲ್ಲಿ ಹೆದ್ದೂರಶೆಟ್ಟಿ ಬಂಧುಗಳು ಹಾಗೂ ಭಕ್ತರು ಪೂಜೆಯನ್ನು ಮಾಡಿ ವಿಸರ್ಜನೆ ಮಾಡಿದರು.
ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳಿಯ ಪೋಲಿಸ ಅಧಿಕಾರಿಗಳು ಬಿಗಿ ಬಂದೋಬಸ್ತ ಏರಿ್ಡಸಿದ್ದರು.