ಸಂಕೇಶ್ವರ

ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯ ಬಾಯಲರ ಪ್ರದೀಪನಕ್ಕೆ ಚಾಲನೆ

ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯ ಬಾಯಲರ ಪ್ರದೀಪನಕ್ಕೆ ಚಾಲನೆ

ಸಂಕೇಶ್ವರ 10 : ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯ ಸನ್ 2023-24ನೇ ಸಾಲಿನ 63ನೇ ಕಬ್ಬು ಅರೆಯುವ ಹಂಗಾಮಿನ ಶುಭಾರಂಭದ ಅಂಗವಾಗಿ “ಬಾಯಲರ ಪ್ರದೀಪನ” ಸಮಾರಂಭವು ಮಂಗಳವಾರ ದಿ. 10ರಂದು ಮುಂಜಾನೆ 11 ಗಂಟೆಗೆ ನಿಡಸೋಸಿಯ ದುರಡುಂಡಿಶ್ವರ ಮಠದ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹಾಗೂ ನಿಜಲಿಂಗೇಶ್ವರ ಮಹಾಸ್ವಾಮಿಗಳು ಇವರ ಅಮೃತ ಹಸ್ತದಿಂದ ಹಾಗೂ ಪಂಡಿತ ಬಾಬುರಾವ ಉಪಾಧ್ಯಾಯ ಮತ್ತು ಹುನ್ನೂರ ವಿಠರಾಯದೇವರ ಪೂಜಾರಿಗಳಾದ ಬೀರಾ​‍್ಪ ಪೂಜೇರಿ ದಂಪತಿಗಳ ಉಪಸ್ಥಿತಿಯಲ್ಲಿ ನೆರವೇರಿತು.  

ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ರಮೇಶ ಕತ್ತಿ, ಸಂಗಮ ಕಾರಖಾನೆಯ ಅಧ್ಯಕ್ಷ ರಾಜೇಂದ್ರ ಪಾಟೀಲ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಗಜಾನನ ಕಳ್ಳಿ, ಹಾಗೂ ಕಾರಖಾನೆಯ ಉಪಾಧ್ಯಕ್ಷ ಶ್ರೀಶೈಲಪ್ಪ ಮಗದುಮ್ಮ, ಸಂಚಾಲಕರಾದ ಶಿವನಾಯಿಕ ನಾಯಿಕ, ಶಿವಪುತ್ರ ಶಿರಕೋಳಿ, ಪ್ರಭುದೇವ ಪಾಟೀಲ, ಬಸವರಾಜ ಕಲ್ಲಟ್ಟಿ, ಸುರೇಶ ಬೆಲ್ಲದ, ಬಾಬಾಸಾಹೇಬ ಅರಜೋಳೆ, ಅಶೋಕ ಪಟ್ಟಣಶೆಟ್ಟಿ, ಬಸಪ್ಪಾ ಮರಡಿ, ಸುರೇಂದ್ರ ದೊಡ್ಡಲಿಂಗನವರ, ಮುಖಂಡರಾದ ಶ್ರೀಕಾಂತ ಹತನೂರೆ, ಕಲಗೌಡ ಪಾಟೀಲ, ಪ್ರಶಾಂತ ಪಾಟೀಲ, ರಾಚಯ್ಯಾ ಹಿರೇಮಠ, ಕಲ್ಲಣ್ಣ ಚೌಗಲಾ, ಗುರು ಕುಲಕರ್ಣಿ, ರಮೇಶ ಕುಲಕರ್ಣಿ, ಮಹಾವೀರ ನಿಲಜಗಿ, ಬಸಗೌಡಾ ಪಾಟೀಲ, ಶಿವಾನಂದ (ನಂದು) ಮುಡಶಿ, ದುಂಡಪ್ಪಾ ಹೆದ್ದೂರಿ, ಶಿವನಪ್ಪಾ ಮದವಾಲ, ಅಮರ ಮಹಾಜನಶೆಟ್ಟಿ, ಅಶೋಕ ಹಿರೇಘೋಳಿ, ರಾಮಣ್ಣಾ ಗೋಟೂರೆ, ಮಾನಿಂಗ ಸನದಿ, ಬಾಳಾಸಾಹೇಬ, ನಾಯಿಕ, ಬಸಗೌಡ ಮಗೆನ್ನವರ, ರಾಯಪ್ಪಾ ಯಶವಂತ, ಪವನ ಪಾಟೀಲ, ತಮ್ಮಣ್ಣಾ ಕರಗುಪ್ಪಿ, ನಿಂಗಪ್ಪಾ ದಾಸ, ಆನಂದ ಲಕ್ಕುಂಡಿ, ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಸಾತಪ್ಪ, ಕರ್ಕಿನಾಯಿಕ, ಮಾಜಿ ಸಮನ್ವಯ ಅಧಿಕಾರಿ ಜಯಸಿಂಗ ಸನದಿ ಕಾರ್ಯಾಲಯ ಅಧೀಕ್ಷಕ ಸುಭಾಷ ನಾಶಿಪುಡಿ, ಹಾಗೂ ಕಾರಖಾನೆಯ ಸದಸ್ಯರು, ಕಬ್ಬು ಬೆಳೆಗಾರರು, ಅಧಿಕಾರಿ ಹಾಗೂ ಕಾರ್ಮಿಕ ವರ್ಗ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ