ಮಹಲಿಂಗಪುರ

38 ವರ್ಷಗಳ ಬಳಿಕವೂ ಮಾಸದ ಸ್ನೇಹಬಂಧ: 1987ಹಿ88 ಸಹಪಾಠಿಗಳ ಸ್ನೇಹ ಸಂಭ್ರಮ

38 ವರ್ಷಗಳ ಬಳಿಕವೂ ಮಾಸದ ಸ್ನೇಹಬಂಧ: 1987ಹಿ88 ಸಹಪಾಠಿಗಳ ಸ್ನೇಹ ಸಂಭ್ರಮ
A friendship bond that hasn't faded even after 38 years: A reunion celebration for the 1987–88 batc

ಲೋಕದರ್ಶನ ವರದಿ 


ಮಹಾಲಿಂಗಪುರ 05: ಕಾಲ ಉರುಳಿತು... ಬದುಕಿನ ದಾರಿಗಳು ಬದಲಾದವು... ಒಬ್ಬೊಬ್ಬರು ಒಂದೊಂದು ಊರು ಸೇರಿದರು. ಆದರೆ ಶಾಲೆಯ ಬೆಂಚಿನ ಮೇಲೆ ಬೆಸೆದ ಸ್ನೇಹದ ಬಂಧ ಮಾತ್ರ 38 ವರ್ಷಗಳ ಬಳಿಕವೂ ಮಾಸಲಿಲ್ಲ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ, ಪರಸ್ಪರ ಆತ್ಮೀಯವಾಗಿ ಅಪ್ಪಿಕೊಂಡು, ನಕ್ಕುಹಿನಲಿದು ಸಂಭ್ರಮಿಸಿದ 1987ಹಿ88ನೇ ಸಾಲಿನ ಎಸ್‌ಸಿಪಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ‘ಸ್ನೇಹದ ಮಹಾ ಸಂಭ್ರಮ’ ಇದಕ್ಕೆ ಸಾಕ್ಷಿಯಾಯಿತು. 

ಪಟ್ಟಣದ ಹೋಟೆಲ್ ಪ್ರೆಸಿಡೆಂಟ್ ಸಭಾಭವನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯರು ಸೇರಿದಂತೆ ದೂರದ ಊರುಗಳಲ್ಲಿ ನೆಲೆಸಿರುವ 100ಕ್ಕೂ ಹೆಚ್ಚು ಸಹಪಾಠಿಗಳು ಪಾಲ್ಗೊಂಡಿದ್ದರು. ವರ್ಷಗಳ ಬಳಿಕ ಮುಖಾಮುಖಿಯಾದ ಗೆಳೆಯರು ಪರಸ್ಪರ ಉಭಯ ಕುಶಲೋಪರಿ ವಿಚಾರಿಸುತ್ತಾ, ಶಾಲಾ ದಿನಗಳ ತುಂಟಾಟ, ಆಟ, ಪಾಠ ಹಾಗೂ ಮರೆಯಲಾಗದ ಘಟನೆಗಳನ್ನು ನೆನಪಿಸಿಕೊಂಡು ಬಾಲ್ಯದ ದಿನಗಳಿಗೆ ಮತ್ತೆ ಮರಳಿದ ಅನುಭವ ಪಡೆದರು. 

ನೆನಪುಗಳೊಂದಿಗೆ ಭಾವನಾತ್ಮಕ ಕ್ಷಣ 2022ರಲ್ಲಿ ನಡೆದ ಮೊದಲ ಗುರು ವಂದನ ಕಾರ್ಯಕ್ರಮದಿಂದ ಇಲ್ಲಿಯವರೆಗೆ ಅಗಲಿದ ಸಹಪಾಠಿಗಳು ಹಾಗೂ ಗುರುಗಳನ್ನು ಈ ಸಂದರ್ಭದಲ್ಲಿ ಭಾವಪೂರ್ಣವಾಗಿ ಸ್ಮರಿಸಲಾಯಿತು. ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.  ‘ಯಾವುದೂ ಶಾಶ್ವತವಲ್ಲ. ಒಂದು ದಿನ ಎಲ್ಲರೂ ಈ ಭೂಮಿಯನ್ನು ಬಿಟ್ಟು ಹೋಗಲೇಬೇಕು. ಇರುವಷ್ಟು ದಿನ ಯಾರ ಮೇಲೂ ಮುನಿಸಿಕೊಳ್ಳದೆ, ನಕ್ಕುಹಿನಲಿದು, ಪರಸ್ಪರ ಪ್ರೀತಿಯಿಂದ ಬದುಕೋಣ’ ಎಂಬ ಭಾವನಾತ್ಮಕ ಮಾತುಗಳು ಸಭೆಯಲ್ಲಿದ್ದವರ ಮನಮುಟ್ಟಿದವು. 


ಸುದ್ದಿ ಓದಿ