ಮಹಲಿಂಗಪುರ

ಸಾಯಿ ಸರೋವರಕ್ಕೆ ಬಾಗಿನ ಅರೆ​‍್ಣ

ಸಾಯಿ ಸರೋವರಕ್ಕೆ ಬಾಗಿನ ಅರೆ​‍್ಣ

ಲೋಕದರ್ಶನ ವರದಿ 

    ಮಹಾಲಿಂಗಪುರ 02: ನಗರದ ಕೆಂಗೇರಿಮಡ್ಡಿ ಬಡಾವಣೆಯಲ್ಲಿರುವ ಸಾಯಿ ಸರೋವರ ಮಳೆಗಾಲದ ಬಳಿಕ ನೀರಿನಿಂದ ತುಂಬಿ ಕಂಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಶೇಖರ್ ಅಂಗಡಿ ಅವರು ಬಾಗಿನ ಅರ​‍್ಿಸಿ ಜಲಮೂಲಕ್ಕೆ ಗೌರವ ಸಲ್ಲಿಸಿದರು. ಮಳೆನೀರನ್ನು ಸಮರ​‍್ಕವಾಗಿ ಸಂಗ್ರಹಿಸುವ ಮೂಲಕ ಕೆರೆ, ಸರೋವರ ಹಾಗೂ ಇತರ ಜಲಮೂಲಗಳನ್ನು ಸಂರಕ್ಷಿಸಿದರೆ ಅಂತರ್ಜಲ ಮಟ್ಟ ಹೆಚ್ಚುವುದರ ಜೊತೆಗೆ ಜನರು ಮತ್ತು ಜಾನುವಾರುಗಳಿಗೆ ನೀರಿನ ಆಸರೆ ದೊರೆಯಲಿದೆ ಎಂದು ಶೇಖರ್ ಅಂಗಡಿ ಹೇಳಿದರು. ಮಳೆನೀರು ವ್ಯರ್ಥವಾಗಿ ಹರಿದುಹೋಗದೆ ಕೆರೆ-ಸರೋವರಗಳಲ್ಲಿ ಸಂಗ್ರಹವಾಗುವುದರಿಂದ ಪರಿಸರ ಸಮತೋಲನ ಕಾಪಾಡಲು ಸಹಕಾರಿಯಾಗುತ್ತದೆ. ಜಲಮೂಲಗಳ ಸಂರಕ್ಷಣೆ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.  ಬಾಗಿನ ಅರೆ​‍್ಣ ಸಂದರ್ಭದಲ್ಲಿ ಸ್ಥಳೀಯರು ಸರೋವರದ ನೀರಿಗೆ ಪೂಜೆ ಸಲ್ಲಿಸಿ ಉತ್ತಮ ಮಳೆ, ಸಮೃದ್ಧಿ ಹಾಗೂ ಜನರ ಜೀವನದಲ್ಲಿ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ವಿಠ್ಠಲ ಕುಳಳಿ, ಮುತ್ತಪ್ಪ ಕುಂದ್ರಾಳ, ಸಿದ್ದಪ್ಪ ರಾವೋಜಿ, ಮಹಾಲಿಂಗ ಶಿವಣಗಿ, ಗಂಗಪ್ಪ ದಿನ್ನಮಣಿ, ಮಹಾದೇವ ಸಾವಂತ, ಚನ್ನಪ್ಪ ಬಳಿಗಾರ ಸೇರಿದಂತೆ ಬಡಾವಣೆಯ ಮುಖಂಡರು, ಮಹಿಳೆಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. 


ಸುದ್ದಿ ಓದಿ