ಮಹಲಿಂಗಪುರ

ಮಹಾಲಿಂಗಪುರದಲ್ಲಿ ನಾಟಕ ಪರ್ವಕ್ಕೆ ಚಾಲನೆ

ಮಹಾಲಿಂಗಪುರದಲ್ಲಿ ನಾಟಕ ಪರ್ವಕ್ಕೆ ಚಾಲನೆ

ಲೋಕದರ್ಶನ ವರದಿ 

ಮಹಾಲಿಂಗಪುರ 02: ಪಟ್ಟಣದ ಎಸ್ಸಿಪಿ ಕಾಲೇಜು ಮೈದಾನದಲ್ಲಿ ಬಿ.ಎಸ್‌.ಆರ್‌. ನಾಟಕ ಸಂಘ, ಗುಬ್ಬಿ ತಂಡ ಆಯೋಜಿಸಿರುವ ನಾಟಕ ಪರ್ವಕ್ಕೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಂಗಭೂಮಿ ಕಲಾವಿದರು ಪ್ರೇಕ್ಷಕರ ಎದುರು ನೇರವಾಗಿ ಪಾತ್ರಗಳಿಗೆ ಜೀವ ತುಂಬುವುದು ಕಠಿಣ ಸಾಧನೆ. ಚಿತ್ರೀಕರಣಕ್ಕಿಂತ ರಂಗಭೂಮಿಯಲ್ಲಿ ನಟರಿಗೆ ತಪ್ಪು ತಿದ್ದಿಕೊಳ್ಳಲು ಅವಕಾಶ ಕಡಿಮೆ ಇದ್ದು, ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮನಸೆಳೆಯುವ ಅಭಿನಯ ನೀಡಬೇಕು ಎಂದರು. ನಾಡಿನ ನೈಜ ನಾಟಕ ಕಲೆಯ ಉಳಿವಿಗೆ ಎಲ್ಲರ ಸಹಕಾರ ಅಗತ್ಯ ಎಂದು ಅವರು ಹೇಳಿದರು. ಗುಬ್ಬಿ ಕಂಪನಿಯ ಎಲ್ಲ ನಾಟಕಗಳು ಶತದಿನೋತ್ಸವ ಕಾಣಲಿ ಎಂದು ಹಾರೈಸಿದರು. ಹಿರಿಯ ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿ, ರಂಗಭೂಮಿ ಕಲಾವಿದರು ಸಂಕಷ್ಟದಲ್ಲಿರುವುದರಿಂದ ಸರ್ಕಾರ ವಯೋಮಾನ ಆಧಾರದಲ್ಲಿ ಮಾಸಾಶನ ನೀಡಬೇಕು ಎಂದು ಒತ್ತಾಯಿಸಿದರು.  


ಸುದ್ದಿ ಓದಿ