ಯರಗಟ್ಟಿ

ಗ್ರಾಮ ದೇವಿಯರಿಗೆ ಉಡಿ ತುಂಬಿದ ಭಕ್ತರು

ಗ್ರಾಮ ದೇವಿಯರಿಗೆ ಉಡಿ ತುಂಬಿದ ಭಕ್ತರು

ಯರಗಟ್ಟಿ: ಪಟ್ಟಣದಲ್ಲಿ ಗ್ರಾಮ ದೇವಿಯರ ಜಾತ್ರೆ ಆರಂಭವಾಗಿದ್ದು, ಮಹೋತ್ಸವದ ಮೂರನೆ ದಿನವಾದ ಗುರುವಾರ ಗ್ರಾಮಸ್ಥರು ದೇವತೆಯರಿಗೆ ಉಡಿ ತುಂಬಿದರು. ಯುವಕರು ವಾಹನಗಳಲ್ಲಿ ಸಂಚರಿಸುತ್ತ ಭಂಡಾರ ಆಟವಾಡಿದರು. ಪಟ್ಟಣಕ್ಕೆ ಬಂದ ಅತಿಥಿಗಳನ್ನು ಭಂಡಾರದಿಂದ ಸ್ವಾಗತಿಸುತ್ತ ಸಂಭ್ರಮಪಟ್ಟರು. ಕೆ ಎಸ್ ಆರ್ ಟಿ ಸಿ ನೌಕರರಿಂದ ಮಹಾಪ್ರಸಾದ ಏರ್ಪಡಿಸಲಾಗಿತ್ತು.ಇದೇ ವೇಳೆ ಜೋಡೆತ್ತಿನ ನಿಮಿಷದ ಓಟದ ಸ್ಪರ್ಧೆ  ಏರ್ಪಡಿಸಲಾಗಿತ್ತು ಸ್ಪರ್ಧೆಗೆ ಅಜೀತಕುಮಾರ ದೇಸಾಯಿ ಚಕ್ಕಡಿ ಓಡಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ನಿಖಿಲ ದೇಸಾಯಿ, ಅಜಯರಾವ ದೇಸಾಯಿ, ರಾಜು ದೇಸಾಯಿ, ಸಚಿನ್ ದೇಸಾಯಿ, ಸಂತೋಷ ಪಾಟೀಲ, ಮಂಜುನಾಥ ತಡಸಲೂರ, ತಮ್ಮಣ್ಣಾ ಕಡೇಮನಿ, ಶಿವಾನಂದ ಕರಿಗೋಣ್ಣವರ, ಶಿವಾನಂದ ಮಿಕಲಿ, ಸೋಮು ಮಾಳಗಿ, ನಿಂಗಪ್ಪ ಕರಿಗೋಣ್ಣವರ, ಫಕ್ಕೀರಪ್ಪ ಕರಿಗೋಣ್ಣವರ, ಸುರೇಶ ಕರಿಗೋಣ್ಣವರ, ಮಾರುತಿ ಯರಝರ್ವಿ , ಹನಮಂತ, ಕಿಡದಾಳ, ಬಸಪ್ಪ ಕರಿಗೋಣ್ಣವರ  ಸೇರಿದಂತೆ ಅನೇಕರು ಉಪಸ್ಥಿತರಿದ್ದರು 

ಸುದ್ದಿ ಓದಿ