ಕಾರವಾರ

ಅಗ್ನಿ ಅನಾಹುತ ತಡೆಗಟ್ಟುವ ಅಣಕು ಪ್ರದರ್ಶನ

ಅಗ್ನಿ ಅನಾಹುತ ತಡೆಗಟ್ಟುವ ಅಣಕು ಪ್ರದರ್ಶನ

ಮುಂಡಗೋಡ 14: ಕರ್ತವ್ಯನಿರತ ಹುತಾತ್ಮರ ನೆನಪಿಗಾಗಿ ಏಪ್ರಿಲ್ 14 ರಂದು ಹುತಾತ್ಮ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ಪ್ರಭಾರ ಮುಂಡಗೋಡ ಅಗ್ನಿ ಶಾಮಕ ಠಾಣೆ ಅಧಿಕಾರಿ ನಾರಾಯಣ ತಳೇಕರ ಹೇಳಿದರು.

ಬುಧವಾರ ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಹಾಗೂ ಕಾತೂರ ಗ್ರಾಮದಲ್ಲಿ ಸಾರ್ವಜನಿಕರಿಗೆ ಅಗ್ನಿ ಅನಾಹುತ ತಡೆಗಟ್ಟುವ ಬಗ್ಗೆ ಪತ್ರ ನೀಡಿ ಅಣಕು ಪ್ರದರ್ಶನ ಮಾಡುವ ಮೂಲಕ ಮಾತನಾಡಿದರು. ಪ್ರತಿ ವರ್ಷ 14 ರಿಂದ 20 ರವರೆಗಿನ ಸಪ್ತಾಹವನ್ನು ದೇಶಾದ್ಯಂತ ಅಗ್ನಿಶಾಮಕ ಸೇವಾ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಅಗ್ನಿಶಾಮಕ ದಳ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಸುದ್ದಿ ಓದಿ