ರಾಣೆಬೆನ್ನೂರ

ದುರ್ಗಾದೇವಿ ಹಬ್ಬದ ಪ್ರಯುಕ್ತ ನಾಟಕ ಕೆಚ್ಚೆದೆಯ ವೀರರಿಗೆ ಕೊಚ್ಚಿ ಹೋದ ಧನಿಕರು

ದುರ್ಗಾದೇವಿ ಹಬ್ಬದ ಪ್ರಯುಕ್ತ ನಾಟಕ ಕೆಚ್ಚೆದೆಯ ವೀರರಿಗೆ ಕೊಚ್ಚಿ ಹೋದ ಧನಿಕರು

ರಾಣೇಬೆನ್ನೂರು 23:  ಪ್ರೀತಿ, ವಿಶ್ವಾಸ, ನಂಬಿಕೆ ಮತ್ತು ಭಾವೈಕ್ಯತೆಯ  ಸಂದೇಶ ಸಾರುವುದೇ, ನಾಟಕಗಳು. ನಾಟಕಗಳಿಂದ, ಬದುಕುವುದನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತಲ್ಲಿದೆ ಎಂದು ಗ್ರಾಮದ ಮುಖಂಡ, ಗುಡಿ ಹೊನ್ನತ್ತಿ ಶ್ರೀ ಹೊನ್ನಮ್ಮ ದೇವಿ  ದೇವಸ್ಥಾನ ಸಮಿತಿಯ ಅಧ್ಯಕ್ಷ ಬಸವರಾಜ ಬಣಕಾರ್ ಹೇಳಿದರು. 

 ತಾಲೂಕಿನ ಹಳೆ ಹೊನ್ನತ್ತಿ ಗ್ರಾಮದಲ್ಲಿ, ಗ್ರಾಮದಲ್ಲಿ ನಡೆದ, ಶ್ರೀ ದುರ್ಗಾದೇವಿ ಕಲಾ ನಾಟ್ಯ ಸಂಘವು , ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ""ಕೆಚ್ಚೆದೆಯ ವೀರರಿಗೆ ಕೊಚ್ಚಿ ಹೋದ ಧನಿಕರು "" ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.           ನಾಟಕಗಳು ಮತ್ತು ನಾಟಕ  ಕಲಾವಿದರು, ಸರ್ವ ಸಮುದಾಯದ ಕೈಗನ್ನಡಿ, ಇತಿಹಾಸದ ನಾಟಕಗಳು ಮತ್ತು ಅಂದಿನ ಕಲಾವಿದರು  ಇಂದು ಪಾಚಿಮಾತ್ಯ ಸಂಸ್ಕೃತಿಯ ಭರಾಟೆಯಲ್ಲಿ, ನೇಪತ್ಯಕ್ಕೆ  ಸರಿಯುವಂತಾಗಿದೆ ಎಂದು, ಅಂದು ಈ ಭಾಗದಲ್ಲಿ ನಡೆಯುತ್ತಿದ್ದ, ನಾಟಕಗಳ  ಭವ್ಯ ಇತಿಹಾಸವನ್ನು ಸ್ಮರಿಸಿದ ಬಣಕಾರ್ ಅವರು, ಪ್ರತಿಯೊಬ್ಬರು, ಯುವಕರಿಗೆ ಸಹಾಯ ಹಸ್ತ ನೀಡುವುದರ ಮೂಲಕ, ನಾಟಕ ಕಲೆಗಳ ಪ್ರೋತ್ಸಾಹಕ್ಕೆ ಸಹಕರಿಸಬೇಕು ಎಂದು ಕರೆ ನೀಡಿದರು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮದ  ಇನ್ನೋರ್ವ ಮುಖಂಡ, ವಿಷ್ಣಪ್ಪ ಕಂಬಳಿ, ಅವರು, ನೈಜ ಕಲೆ ಮತ್ತು ಕಲಾವಿದರಿಗೆ ಎಂದಿಗೂ ಬರವಿಲ್ಲ, ಆದರೆ ಅವರಿಗೆ ವೇದಿಕೆಗಳ ಅಗತ್ಯವಿದೆ, ಗ್ರಾಮದ ಯುವ ಮುಖಂಡರು, ಈ ಭಾಗದ, ಹಿಂದಿನ ಇತಿಹಾಸಕ್ಕೆ ಸಾಕ್ಷಿ ಎಂಬಂತೆ, ಕಳೆದ 5 ವರ್ಷಗಳಿಂದ, ನಿರಂತರ ನಾಟಕ ಆಡುತ್ತಿರುವುದು ಗ್ರಾಮೀಣ ಸಂಸ್ಕೃತಿಗೆ ಸಾಕ್ಷಿಯಾಗಿದೆ ಎಂದರು.           

ಪ್ರಾಸ್ತಾವಿಕವಾಗಿ  ಮಾತನಾಡಿದ, ಕಲಾ ನಾಟ್ಯ ಸಂಘದ  ಕಾರ್ಯದರ್ಶಿ, ಸಂತೋಷ ಈಳಗೇರ, ಅವರು, ಗುಡಿ ಹೊನ್ನತ್ತಿ, ಹಳೆ ಹೊನ್ನತ್ತಿ, ಹೊಸ ಹೊನ್ನತ್ತಿ ಹನುಮಾಪುರ ಮತ್ತು ಕೆರಿ ಮಲ್ಲಾಪುರ ಗ್ರಾಮವು ಸೇರಿದಂತೆ ಸುತ್ತಲೂ ನಾಟಕ ಕಲಾವಿದರ ತವರೂರು. ಅಂದಿನ ಜನತೆ, ಯಾವುದೇ ಕಂಪನಿಗಳು ಇಲ್ಲಿಗೆ ಬಂದರೆ, ಅವರನ್ನು ಪೋಷಿಸಿ, ಕಳುಹಿಸಿದ  ಇತಿಹಾಸವಿದೆ ಎಂದರು.         ನಾಟಕ ನೋಡಿದವರು, ನೈತಿಕತೆ ಕಲಿಯುತ್ತಾರೆ, ಸಿನಿಮಾ ನೋಡಿದವರು ಫ್ಯಾಶನ್ ಮಾಡುತ್ತಾರೆ, ನಾವೆಲ್ಲರೂ ಇತಿಹಾಸದ ಪರಿಕಲ್ಪನೆಯಲ್ಲಿ ಸಾಗಬೇಕಾದ ಇಂದಿನ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರಮೇಶ್ ಪಟ್ಟಣಶೆಟ್ಟಿ, ಗ್ರಾಮದ ಮುಖಂಡರಾದ ಡಾ: ಪುಟ್ಟಯ್ಯ ಭಿಕ್ಷಾವರ್ತಿಮಠ, ಕುರುವತ್ತಪ್ಪ ಬಣಕಾರ್, ಹೊನ್ನಪ್ಪ ತಿಮ್ಮೇನಹಳ್ಳಿ, ಉಪಾಧ್ಯಕ್ಷ ಪ್ರಕಾಶ ಮಾಗಳದ, ಖಜಾಂಚಿ ಹೊನ್ನಪ್ಪ ನಿಟ್ಟೂರು, ಮ್ಯಾನೇಜರ್ ಮಂಜಪ್ಪ ಹುಬ್ಬಳ್ಳಿ ಕುಮಾರ್ ತಿಮ್ಮೇನಹಳ್ಳಿ ಸೇರಿದಂತೆ ಮತ್ತಿತರ ಗಣ್ಯರು, ಮುಖಂಡರು, ಸಂಘದ ಪದಾಧಿಕಾರಿಗಳು, ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.  ನೈಜ ಮತ್ತು ಹವ್ಯಾಸಿ ಕಲಾವಿದರ, ಮನೋಜ್ಞ  ಅಭಿನಯದಲ್ಲಿ ಮೂಡಿಬಂದ, ಅಸಂಗಪ್ಪ ಪಾಲ್ತಿ, ವಿರಚಿತ,  ಕೆಚ್ಚೆದೆಯ ವೀರರಿಗೆ ಕೊಚ್ಚಿ ಹೋದ ಧನಿಕರು, ನಾಟಕವು ಗ್ರಾಮೀಣ ನಾಗರಿಕರ, ಮನಸಣಿಸುವಲ್ಲಿ ಯಶಸ್ವಿ ಕಂಡರು. ಷಣ್ಮುಖ ವಿಜಯಲಕ್ಷ್ಮಿ ಸುರೇಶೆಟ್ಟಿಕೊಪ್ಪ, ಮತ್ತು ಸಂಗಡಿಗರು, ಸಂಗೀತ ನಿರ್ದೇಶನ ನೀಡಿದರು. 


ಸುದ್ದಿ ಓದಿ