ಸಾಮಾಜಿಕ ಜಾಲತಾಣದಿಂದ ಸಂರಕ್ಷಿಸಿಕೊಳ್ಳಲು ನಿರಂತರ ಎಚ್ಚರಿಕೆ: ವಿಶ್ರಾಂತ, ಎಸ್.ಎಚ್. ಮಿಟ್ಟಲಕೋಡ
ಧಾರವಾಡ,13 : ಹೊಸ ಕಾನೂನಿನಲ್ಲಿ ಡಿಜಿಟಲ್ ಅರೆಸ್ಟಿಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಜಾರಿಯಲ್ಲಿಲ್ಲ. ಆದರೆ ಸ್ವಯಂಕೃತ ನಾವು ಬಳಸಿಕೊಳ್ಳುತ್ತಿರುವ ನವೀನ ತಂತ್ರಜ್ಞಾನ ಅಥವಾ ಇನ್ನಾವುದೇ ಸಾಮಾಜಿಕ ಜಾಲತಾಣದಿಂದ ಸಂರಕ್ಷಿಸಿಕೊಳ್ಳಲು ನಿರಂತರ ಎಚ್ಚರಿಕೆ ವಹಿಸಬೇಕು ಎಂದು ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾನೂನು ಮಂಟಪವು, ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಡಿಜಿಟಲ್ ಅರೆಸ್ಟ್ ಎಚ್ಚರಿಗೆ ಹಾಗೂ ಕಾನೂನು ಜಾಗೃತಿ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ದೇಶದಲ್ಲಿ ಹೊಸ ಕಾನೂನುಗಳು ಜಾರಿಯಾಗಬೇಕಾದರೆ ಸಂಪೂರ್ಣ ಚರ್ಚೆಯಾಗಿಲ್ಲ. ಬ್ರಿಟಿಷ್ ಸರಕಾರ ರಚಿಸಿದಂಥ 90ಅ ಹಳೆಯ ಕಾನೂನುಗಳು ಮುಂದುವರೆದಿವೆ. ಆದರೆ, ಕೇವಲ 10ಅ ಕಾನೂನುಗಳು ಹೊಸದಾಗಿ ಕೆಲ ಕಲಮುಗಳ ಮೂಲಕ ತಿದ್ದುಪಡಿಯಾಗಿವೆ ಎಂದರು.
ಡಿಜಿಟಲ್ ಅರೆಸ್ಟ್ ಎಂದರೆ ಎಲ್ಲರಿಗೂ ಭಯ, ಹಿಂಜರಿಕೆ ಆಗಿದೆ. ಏಕೆಂದರೆ ಅದರಲ್ಲಿ ವ್ಯಕ್ತಿಯ ಸ್ವಾತಂತ್ರ್ಯ ಹರಣವಾಗುತ್ತದೆ. ಶಾರೀರಿಕ ಬಂಧನಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಡಿಜಿಟಲ್ ಅರೆಸ್ಟ್ ಕುರಿತಂತೆ ಯಾವುದೇರೀತಿಯಿಂದ ನಾಗರಿಕರು ಭಯ ಪಡುವ ಅವಶ್ಯಕತೆ ಇಲ್ಲ. ಇಲ್ಲಿ ಎಚ್ಚರಿಕೆ ಮುಖ್ಯ. ನಮ್ಮ ಬಲೆಗೆ ನಾವೇ ಬಲಿ ಹೆಣೆದುಕೊಂಡು ಜೇಡರ ಬಲೆಯಂತೆ ಸಂದಿಗ್ಧತೆಗೆ ಒಳಗಾಗಬಹುದು. ಅನೇಕ ಹೊಸ ತಿದ್ದುಪಡಿ ಕಾನೂನುಗಳ ಕುರಿತು ಸಂಕ್ಷಿಪ್ತವಾಗಿ ಐ.ಪಿ.ಸಿ(ಭಾರತೀಯದಂಡ ಸಂಹಿತೆ) ಕಾನೂನು ಈಗ ಬಿ.ಎನ್.ಎಸ್(ಭಾರತೀಯ ನ್ಯಾಯ ಸಂಹಿತೆ), ಸಿ.ಆರ್.ಪಿ.ಸಿ.(ಕ್ರಿಮಿನಲ್ ಪ್ರೊಸಿಜರ್ ಕೋಡ್) ಕಾನೂನು ಈಗ ಬಿ.ಎನ್.ಎಸ್.ಎಸ್(ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ) ಮತ್ತು ಇಂಡಿಯನ್ ಎವಿಡೆನ್ಸ್ ಆ್ಯಕ್ಟ್(ಭಾರತೀಯ ಸಾಕ್ಷ್ಯಕಾಯ್ದೆ) ಬಿ.ಎಸ್.ಎ (ಭಾರತೀಯ ಸಾಕ್ಷಿ ಅಧಿನಿಯಮ) ಎಂದು ಬದಲಾಗಿದೆ ಎಂದು ಎಸ್.ಎಚ್. ಮಿಟ್ಟಲಕೋಡ ಮಾಹಿತಿ ನೀಡಿ, ಕಾನೂನಿನ ಅನೇಕ ದೃಷ್ಟಾಂತಗಳ ಉದಾಹರಣೆಯೊಂದಿಗೆ ಮಾರ್ಮಿಕವಾಗಿ ಉಪನ್ಯಾಸ ನೀಡಿದ್ದು ವಿಶೇಷವಾಗಿತ್ತು.
ಮುಖ್ಯ ಅತಿಥಿಯಾಗಿ ಬೆಂಗಳೂರಿನ ಕರ್ನಾಟಕರಾಜ್ಯ ವಕೀಲರ ಪರಿಷತ್ತು ಮತ್ತು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಆನಂದಕುಮಾರ ಎ. ಮಗದುಮ್ಮ ಭೂಸ್ವಾಧೀನ ಕಾನೂನು ರಚನೆ ಹಾಗೂ ತಿದ್ದುಪಡಿಯಲ್ಲಿ ಸಾಕಷ್ಟು ಲೋಪದೋಷಗಳು ಸೇರಿದಂತೆ ಕಾನೂನು ವಿಷಯಗಳ ಕುರಿತು ಮಾತನಾಡಿ, ಈಗಾಗಲೇ ರಾಜ್ಯ ವಕೀಲರ ಪರಿಷತ್‌ಚಿಂತನೆ ನಡೆಸಿದೆ. ಈ ಕುರಿತಂತೆ ನುರಿತ ಕಾನೂನು ತಜ್ಞರ ಸಲಹೆ ಪಡೆಯಲಿದೆ ಹಾಗೂ ಕ.ವಿ.ವ. ಸಂಘ ಕಾನೂನು ಮಂಟಪದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ವಕೀಲರ ಸಂಘದ ಮಾಜಿಅಧ್ಯಕ್ಷ ಸಿ.ಎಸ್. ಪೊಲೀಸ ಪಾಟೀಲ ಮಾತನಾಡುತ್ತಾ, ಸದೃಢ ಸಮಾಜ ಶಾಂತಿಯಿಂದ ಇರಬೇಕಾದರೆ ಕಾನೂನು ಜ್ಞಾನ ಅವಶ್ಯಕತೆ ಇದೆ. ಪ್ರತಿಯೊಬ್ಬರಿಗೂ ಕಾನೂನು ಜ್ಞಾನ ಇರಬೇಕು ಎಂದರು.
ವೇದಿಕೆ ಮೆಲೆ ಪೊಲೀಸ ಅಧಿಕಾರಿ ಎನ್. ಸಿ.ಕಾಡದೇವರ ಉಪಸ್ಥಿತರಿದ್ದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾನೂನು ಮಂಟಪದ ಸಂಚಾಲಕ ಗುರು ಹಿರೇಮಠ ನಿರೂಪಿಸಿದರು. ಅಶೋಕ ಕೋರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶತುರಮರಿ, ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಬಿ.ಎಸ್. ಸಂಗಟಿ, ಎನ್,ಎಸ್. ರಸಾಳಕರ, ಎನ್.ಎಸ್. ಭಟ್, ಮುತ್ತಿನ ಸಿ.ಜಿ. ಹಿರೇಮಠ, ಎಸ್.ಬಿ. ಪಾಟೀಲ, ಡಾ.ಲಿಂಗರಾಜ ಅಂಗಡಿ, ಸಿ.ಎಸ್. ನಾಗಶೆಟ್ಟಿ, ಸರಸ್ವತಿ ಪೂಜಾರ, ಸವಿತಾ ಹಾನಗಲ್, ಪ್ರಭಾವತಿ ದೇಸಾಯಿ, ಎನ್.ಆರ್.ಬಾಳಿಕಾಯಿ, ಎಸ್.ಜಿ. ಶಾಪೂರಮಠ, ಚಂದ್ರಶೇಖರ ಮಹಾಜನ ಶೆಟ್ಟರ, ಸದಾಶಿವ ಮರ್ಜಿ, ಸುವರ್ಣ ಸುರಕೋಡ, ಬಸವರಾಜ ಪಟ್ಟಣದ, ಕೆ.ಎಂ.ಅಂಗಡಿ ಸೇರಿದಂತೆ ಮುಂತಾದವರಿದ್ದರು.