ಇಂಡಿ

ನಿಯಂತ್ರನ ತಪ್ಪಿ ಬೈಕ್ ಬಿದ್ದು ಸವಾರ ಸಾವು

ನಿಯಂತ್ರನ ತಪ್ಪಿ ಬೈಕ್ ಬಿದ್ದು ಸವಾರ ಸಾವು

ಇಂಡಿ 16 : ಚಾಲನಾ ನಿಯಂತ್ರನ ತಪ್ಪಿ ಬೈಕ್ ಸವಾರ ರಸ್ತೆ ಬದಿಯಲ್ಲಿರುವ ತಗ್ಗುಗುಂಡಿಗೆ ಬಿದ್ದ ಪರಿಣಾಮ ಚಾಲಕನಿಗೆ ಗಂಭೀರ ಗಾಯಗೊಂಡು ವಿಜಯಪೂರದ ಬಿ.ಎಲ್.ಡಿ.ಇ. ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ

ಮಹಾದೇವಪ್ಪ ಕಂಠೆಪ್ಪ ಜಂಬಗಿ(40) ಮೃತ ವ್ಯಕ್ತಿಯಾಗಿದ್ದು, ಈತನು ರಾಯಭಾಗದ ಕೆಎಸ್‍ಆರ್‍ಟಿಸಿ ಡಿಪೋದಲ್ಲಿ ಚಾಲಕ ಕಂ ನಿರ್ವಾಹಕ ಅಂತಾ ನೌಕರಿ ಮಾಡುತ್ತಿದ್ದು, ವಾರಕ್ಕೊಮ್ಮೆ ರಾಯಭಾಗದಿಂದ ಶಿರಕನಳ್ಳಿಯ ನಮ್ಮ ಮನೆಗೆ ಬಂದು ಒಂದು ದಿವಸ ಇದ್ದು ಹೋಗುತ್ತಿದ್ದನು. ಆದರೆ ಶುಕ್ರವಾರ ತಾಂಬಾ ಗ್ರಾಮಕ್ಕೆ ಹೋಗಿ ಮರಳಿ ಬರುವ ಸಂದರ್ಭದಲ್ಲಿ ತಾಂಬಾ ತಾಂಡಾದ ಹತ್ತಿರ ರಸ್ತೆಯ ಕರ್ವಿಂಗ್‍ದಲ್ಲಿ ಚಾಲನಾ ನಿಯಂತ್ರನ ತಪ್ಪಿ ರಸ್ತೆಯ ಬದಿಯಲ್ಲಿರುವ ತಗ್ಗುಗುಂಡಿಗೆ ಮೋಟರ್ ಸೈಕಲ್ ಬಿದ್ದು ಪರಿಣಾಮದಿಂದ ಸವಾರನಿಗೆ ತಲೆಗೆ, ಮುಖಕ್ಕೆ ಮತ್ತು ಕೈಗೆ ಭಾರಿ ಗಾಯವಾಗಿದ್ದು. ಚಿಕಿತ್ಸೆಗಾಗಿ ವಿಜಯಪೂರದ ಬಿ.ಎಲ್.ಡಿ.ಇ. ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿರುತ್ತಾನೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸುದ್ದಿ ಓದಿ