ರಾಣೆಬೆನ್ನೂರ

ಜಿಲ್ಲೆಗೊಂದು ವಿಶ್ವವಿದ್ಯಾಲಯ ಸರ್ಕಾರದ ಕ್ರಮ ಸ್ವಾಗತಾರ್ಹ: ಬಾಳೆಕಾಯಿ

ಜಿಲ್ಲೆಗೊಂದು ವಿಶ್ವವಿದ್ಯಾಲಯ ಸರ್ಕಾರದ ಕ್ರಮ ಸ್ವಾಗತಾರ್ಹ: ಬಾಳೆಕಾಯಿ

 ರಾಣೆಬೆನ್ನೂರು 16: ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ವಿಶ್ವವಿದ್ಯಾಲಯ ಪ್ರತಿಷ್ಠಾಪಿಸಲು ಮುಂದಾಗಿರುವ ಸರಕಾರದ ಈ ಕ್ರಮ ಅತ್ಯಂತ ಸ್ವಾಗತಾರ್ಹವಾಗಿದೆ ಎಂದು ಎಸ್. ಜೆ.ಎಂ. ವಿ  ಮಹಿಳಾ ಕಾಲೇಜು ನಿವೃತ್ತ  ಪ್ರಾಚಾರ್ಯ ಮಾಜಿ ಸಿನೇ ಟ್ ಸದಸ್ಯ ಪ್ರೊ ಎನ್. ಆರ್. ಬಾಳೆಕಾಯಿ, ಸ್ವಾಗತಿಸಿ, ರಾಜ್ಯದ ಮುಖ್ಯಮಂತ್ರಿಗಳಿಗೆ ಅಭಿನಂದಿಸಿದ್ದಾರೆ.

 ನೂತನ ವಿಶ್ವವಿದ್ಯಾಲಯವು ವಾಣಿಜ್ಯನಗರಿ ರಾಣೇಬೆನ್ನೂರಲ್ಲಿ ಸ್ಥಾಪಿಸಬೇಕೆನ್ನುವ ಬೇಡಿಕೆಯನಿಟ್ಟುಕೊಂಡು  ನಡೆಸುತ್ತಿರುವ ಹೋರಾಟ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ತಮ್ಮ ಸಹಮತ ಬೆಂಬಲ ವ್ಯಕ್ತಪಡಿಸಿರುವ ಬಾಳೆಕಾಯಿ ಅವರು, ನ್ಯಾಯಸಮ್ಮತವಾಗಿ  ಜಿಲ್ಲೆಯಲ್ಲಿಯೇ ಬಹುದೊಡ್ಡ ನಗರವಾಗಿರುವ, ವಾಣಿಜ್ಯೋದ್ಯಮಿ ಉತ್ಪಾದನೆ ಮತ್ತು ವಾಣಿಜ್ಯೋದ್ಯಮಿ ಬೆಳವಣಿಗೆಯಲ್ಲಿ ಏಷ್ಯಾ ಖಂಡದಲ್ಲಿಯೇ ಹೆಸರು ಮಾಡಿ ಗುರುತಿಸಿಕೊಂಡಿರುವ, ವಾಣಿಜ್ಯ ನಗರಿ ರಾಣೆಬೆನ್ನೂರಲ್ಲಿ, ಈ ವಿಶ್ವವಿದ್ಯಾಲಯ, ಪ್ರಾರಂಭವಾಗ ಬೇಕಾಗಿರುವುದು ನ್ಯಾಯ ಸಮ್ಮತವಾಗಿದೆ ಎಂದು ಹೋರಾಟ ಸಮಿತಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಗಾಂಧೀಜಿ ಕಂಡ ಗ್ರಾಮ ಸ್ವರಾಜ್ಯದ ಕನಸು, ಮತ್ತು ಎಂ ಡಿ ನಂಜುಂಡಸ್ವಾಮಿ ಅವರು ನೀಡಿರುವ ವರದಿಯಂತೆ ಅಧಿಕಾರ ವಿಕೇಂದ್ರೀಕರಣವನ್ನು ಹೊಂದಬೇಕಾದರೆ ಈ ನೂತನ ವಿಶ್ವವಿದ್ಯಾಲಯವು ರಾಣೆಬೆನ್ನೂರು ಅಥವಾ ತಾಲೂಕಿನ ವ್ಯಾಪ್ತಿಯಲ್ಲಿ  ಸ್ಥಾಪಿಸುವುದು ಸೂಕ್ತವಾಗಿದೆ ಎಂದು ಎನ್. ಆರ್.ಬಾಳಿಕಾಯಿ ಅವರು, ಬೆಂಬಲ ಸೂಚಿಸಿ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗೂ ಸರಕಾರವು ಸಹ, ಯಾವುದೇ ಮೀನಾ ಮೇಷ ಮಾಡದೆ, ಸೂಕ್ತ ಕ್ರಮ ಕೈಗೊಂಡು, ಕೂಡಲೇ ವಿಶ್ವವಿದ್ಯಾಲಯ ಮುಂದಾಗಿ, ತಾಲೂಕಿನ ಜನರ ಆಸೆಯನ್ನು, ಈಡೇರಿಸಲು ಮುಂದಾಗಬೇಕೆಂದು ಸಕರ್ಾರಕ್ಕೆ ತಮ್ಮ ಮನವಿ ಮಾಡಿದ್ದಾರೆ 


 

ಸುದ್ದಿ ಓದಿ