ಮುಂದುವರೆದ ಚಿರತೆ ದಾಳಿಗೆ 13 ವರ್ಷದ ಜಯಸುಧಾ ಬಲಿ
ಬಳ್ಳಾರಿ 25: ಗಣಿನಾಡು ಬಳ್ಳಾರಿಯಲ್ಲಿ ಮುಂದುವರೆದ ಚಿರತೆ ದಾಳಿಗೆ ಹದಿಮೂರುವರ್ಷದ ಬಾಲಕಿ ಜಯಸುಧಾಗೆ ಚಿಕಿತ್ಸೆ ಪಲಕಾರಿಯಾಗದೆ ಸಾವನಪ್ಪಿದ್ದಾಳೆ. ಮಂಗಳವಾರ ಮದ್ಯಾಹ್ನ 11 ಗಂಟೆ ಸುಮಾರಿಗೆ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಈ ಘಟನೆ ಸಂಬವಿಸಿದ್ದು. ಬಾಲಕಿ ಹೊರಗಡೆ ಕೂಳಿತಿದ್ದಾಗ ಚಿರತೆ ದಾಳಿ ನಡೆಸಿದೆ. ಆ ಬಾಲಕಿಯನ್ನು ಹೊತ್ತೊಯ್ಯುತ್ತಿರುವಾಗ ಕಿರಿಚಿದ ಶಬ್ದವನ್ನು ಕೇಳಿ ಗ್ರಾಮಸ್ಥರು ಹೊರಬಂದಾಗ ಚಿರತೆ ಆ ಮಗುವನ್ನು ಅಲ್ಲೆ ಬಿಟ್ಟು ಹೋಗಿದೆ. ತಕ್ಷಣ ಬಾಲಕಿಯನ್ನು ರಕ್ಷಿಸಲು ಜಿಲ್ಲೆಯ ಕಂಪ್ಲಿ ತಾಲೂಕಿನ ಸರಕಾರಿ ಆಸ್ಪತ್ರೆಗೆ ಕರೆದೊಯ್ಯದರು. ಆದರೆ ಚಿಕಿತ್ಸೆ ಪಲಕಾರಿಯಾಗದೆ ಬಾಲಕಿ ಸಾವನಪ್ಪಿದ್ದಾಳೆ. ಈ ಕುರಿತು ಕುಡತಿನಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಅದೇ ತಾಲೂಕಿನ ದೇವಲಾಪುರ ಗ್ರಾಮ ಪಂಚಾಯಿತಿ ಸೋಮಲಾಪುರ ಗ್ರಾಮದಲ್ಲಿ ನಡೆದ ಘಟನೆಯನ್ನು ಇಲ್ಲಿ ಸ್ಮರಿಸಬಹುದು.