9ನೇ ವರ್ಷದ ಸಾಮೂಹಿಕ ವಿವಾಹ ರದ್ದು
ಶಿಗ್ಗಾವಿ 25: ಪ್ರತಿ ವರ್ಷದಂತೆ ಈ ವರ್ಷವು ಭಾರತ ಸೇವಾ ಸಂಸ್ಥೆ(ರಿ) ಬನ್ನೂರ ಇವರ ವತಿಯಿಂದ ಬನ್ನೂರ ಗ್ರಾಮದಲ್ಲಿ ಬಸವ ಜಯಂತಿ ಪ್ರಯುಕ್ತ 9 ನೇ ವರ್ಷದ ಸರ್ವ ಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ನೆಡೆಸಲು ಕೋವಿಡ್ ನಿಯಮಾವಳಿಗಳ ಪ್ರಕಾರ ನಡೆಸಲು ಆಗದಿರುವುದು ಬೇಸರ ತಂದಿದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಹಾಗೂ ಗುತ್ತಿಗೆದಾರ ಸಂಘದ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಪಟ್ಟಣದ ಪತ್ರಕರ್ತರೊಂದಿಗೆ ಬೇಸರದಿಂದ ಮಾತನಾಡಿ ರಾಜ್ಯ ಸರಕಾರದ ಕೊವಿಡ್ 19 ಮಾರ್ಗಸೂಚಿಯನ್ವಯ ಸಭೆ ಸಮಾರಂಭಗಳನ್ನು ನೆಡೆಸಲು ಅನುಮತಿ ಇಲ್ಲದಿರುವುದರಿಂದ ತಾಲೂಕ ದಂಡಾಧಿಕಾರಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅನುಮತಿಯನ್ನು ನಿರಾಕರಿಸಿರುವುದರಿಂದ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆಯೆಂದು ಬಹಳ ಬೇಸರದಿಂದ ಪತ್ರಿಕಾ ಪ್ರಕಟಣೆಗೆ ತಿಳಿಸಿರುತ್ತಾರೆ.