13ರಂದು 9ನೇ ಕನ್ನಡ ಸಾಹಿತ್ಯ ಸಮೇಳನ
ಜಮಖಂಡಿ 09: ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ, ಜಿಲ್ಲಾ, ತಾಲೂಕ ಘಟಕ ಸಹಯೋಗದಲ್ಲಿ 9ನೇ ಕನ್ನಡ ಸಾಹಿತ್ಯ ಸಮೇಳನ ಅಕ್ಟೋಬರ್ 13ರಂದು ಅದ್ದೂರಿಯಾಗಿ ಜರುಗಲಿದೆ ಎಂದು ಕನ್ನಡ ಸಾಹಿತ್ಯ ಸಮೇಳನದ ತಾಲೂಕ ಅಧ್ಯಕ್ಷ ಸಂತೋಷ ತಳಕೇರಿ ತಿಳಿಸಿದರು.
ನಗರದ ಸರಕಾರಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 9ನೇ ಕನ್ನಡ ಸಾಹಿತ್ಯ ಸಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ನಂತರ ಮಾತನಾಡಿದ ಅವರು, 109 ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ನಾಡು, ನುಡಿ, ನೆಲ, ಜಲದ ಬಗ್ಗೆ ಕಾರ್ಯವನ್ನು ಮಾಡುತ್ತಾ ಬಂದಿದೆ. ಆದರಿಂದ ಕನ್ನಡ ಸಾಹಿತ್ಯಗಳನ್ನು ಗೌರವಿಸುವ ಸಲುವಾಗಿ ಒಂದು ದಿನದ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮವು ಜರುಗುವುದು. ಸಮೇಳನಾಧ್ಯಕ್ಷರಾಗಿ ರುದ್ರಾವಧೂತ ಮಠದ ಸಹಜಾನಂದ ಅವಧೂತರು ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದರು.
ಬೆಳಗ್ಗೆ 7,15 ಗಂಟೆಗೆ ರಾಷ್ಟ್ರಧ್ವಜ, ಪರಿಷತ್ತಿನ ಧ್ವಜ, ಕನ್ನಡ ಧ್ವಜ ಹೀಗೆ ಮೂರು ಧ್ವಜಾರೋಹಣ ನೇರವೆರಿಸಲಾಗುತ್ತದೆ. ಬೆಳಗ್ಗೆ 8 ಗಂಟೆಗೆ ಸಮೇಳನಾಧ್ಯಕ್ಷ ರುದ್ರಾವಧೂತ ಮಠದ ಸಹಜಾನಂದ ಅವಧೂತರ ನೇತೃತ್ವದಲ್ಲಿ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆಯು ಹಳೆ ತಹಶೀಲ್ದಾರ ಕಚೇರಿಯಿಂದ ಪ್ರಾರಂಭಗೊಂಡು. ನಗರದ ಪ್ರಮುಖ ರಸ್ತೆ ಮೂಲಕ ಸಂಚರಿಸಿ ಬಸವ ಭವನವನ್ನು ತಲುಪುವುದು. ವೇದಿಕೆಯಲ್ಲಿ ಸಮೇಳನಾಧ್ಯಕ್ಷರ ಸಹಯೋಗದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಜರುಗುವದು. ಮತ್ತು ನಾಡಗೀತೆಯೊಂದಿಗೆ ಕಾರ್ಯಕ್ರಮ ನಡೆಯುವುದು.ಮಧ್ಯಾಹ್ನ 12 ಗಂಟೆಗೆ 1ನೇ ಗೋಷ್ಠಿ ಕನ್ನಡ, ಮಹಿಳೆ ಹಾಗೂ ದಲಿತ ಗೋಷ್ಠಿ ನಡೆಯುತ್ತದೆ. 2 ನೇ ಗೋಷ್ಠಿ 12,15 ಕ್ಕೆ ಕವಿಗೋಷ್ಠಿ, 3ನೇ ಗೋಷ್ಠಿ 3,15 ಕ್ಕೆ ವಿಶೇಷ ಉಪನ್ಯಾಸ ಮತ್ತು ಸಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯುವುದು, ಸಂಜೆ 4 ಗಂಟೆಗೆ ಸಮಾವೇಶ ನಿರ್ಣಯ, 4,15ಕ್ಕೆ ಸನ್ಮಾನ ಮತ್ತು ಸಮಾರೋಪ ಸಮಾರಂಭ ಜರುಗುವುದು. ಹಾಗೂ 16 ಪುಸ್ತಕ ಮಳಿಗೆಗಳನ್ನು ಸಹ ಉದ್ಘಾಟನೆ ಮಾಡಲಾಗುತ್ತದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಮಾಜಿ ವಿ,ಪ,ಸದಸ್ಯ ಜಿ,ಎಸ್,ನ್ಯಾಮಗೌಡ, ಡಾ, ಉಮೇಶ ಮಹಾಬಳಶೆಟ್ಟಿ, ಡಾ, ಎಚ್,ಡಿ, ದಡ್ಡಿ, ಬಸವರಾಜ ಕಡ್ಡಿ, ವಿನೋದ ಲೋಣಿ, ರಾಜೇಶ್ವರಿ ಹಿರೇಮಠ, ಬಸವರಾಜ ಮಾಳಿ ಸೇರಿದಂತೆ ಕನ್ನಡ ಸಾಹಿತ್ಯ ಸಮೇಳನದ ಕಾರ್ಯಕರ್ತರು ಹಾಗೂ ಸಾಹಿತಿಗಳು ಅನೇಕರು ಸುದ್ದಿಗೋಷ್ಠಿಯಲ್ಲಿ ಇದ್ದರು.