ಇಂಡಿ

ಗುರುಬಸವ ಕಾಲೇಜಿಗೆ ಶೇ.99ರಷ್ಟು ಫಲಿತಾಂಶ

ಗುರುಬಸವ ಕಾಲೇಜಿಗೆ ಶೇ.99ರಷ್ಟು ಫಲಿತಾಂಶ

ಇಂಡಿ 18: ಪಟ್ಟಣದ ಗುರುಬಸವ ಕಾಲೇಜಿನಲ್ಲಿ 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.99ರಷ್ಟಾಗಿದೆ. 

ಒಟ್ಟು 53 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ಶೇ.85ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಐಶ್ವರ್ಯ ನಾಗಪ್ಪ ಕೊಡಹೊನ್ನ ಶೇ.91.50 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಮಹಿಬೂಬ ಇಸಾಕ ಅತ್ತಾರ ಶೇ.89.33ರಷ್ಟು ಅಂಕ ಪಡೆದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾನೆ. ಹಾಗೂ ಪ್ರಗತಿ ಶಿವಪ್ಪ ಕಂಟಿಕಾರ ಶೇ.86.5 ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಇವರ ಸಾಧನೆಗೆ ಅಧ್ಯಕ್ಷರು ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ಸಮೂಹ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. 

ಸುದ್ದಿ ಓದಿ