ಗೋಕಾಕ್

ಶಿವಶರಣ ನುಲಿ ಚಂದ್ರಯ್ಯನವರ 917 ನೇ ಜಯಂತ್ಯೋತ್ಸವ

ಶಿವಶರಣ ನುಲಿ ಚಂದ್ರಯ್ಯನವರ 917 ನೇ ಜಯಂತ್ಯೋತ್ಸವ

ಘಟಪ್ರಭಾ 27 : ಸಮೀಪದ ಶಿಂದಿಕುರಬೇಟ ಗ್ರಾಮದ ಸಮಸ್ತ ಕೊರಮ (ಭಜಂತ್ರಿ) ಬಳಗದ ಸಹಯೋಗದಲ್ಲಿ ಕಾಯಕಯೋಗಿ ಶಿವಶರಣ ನುಲಿ ಚಂದ್ರಯ್ಯನವರ 917 ನೇ ಜಯಂತ್ಯೋತ್ಸವ ಅ.30 ರಂದು ಫಾಲ್ಸ್‌ ರಸ್ತೆಯ ಕರೆಮ್ಮಾದೇವಿ ದೇವಸ್ಥಾನದ ಹತ್ತಿರ ಜರುಗಲಿದೆ. 

ಕಾರ್ಯಕ್ರಮದ ದಿವ್ಯ ಸಾನಿದ್ಯ ಘಟಪ್ರಭಾದ ಕೆಂಪಯಾಸ್ವಾಮಿ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ವಡೇರಹಟ್ಟಿಯ ಅಂಬಾ ದರ್ಶನಪೀಠದ ಪೀಠಾದಕ್ಷರಾದ ನಾರಾಯಣ ಶರಣರು ವಹಿಸಲಿದ್ದು, ಉದ್ಘಾಟಕರಾಗಿ ಸಿ.ಪಿ.ಐ. ಡಾ. ಹಣಮಂತ ಕೆ ಭಜಂತಿ ಬೆಂಗಳೂರು, ಶಿಂದಿಕುರಬೇಟದ ಸಮಾಜ ಮುಖಂಡರಾದ ಮಡ್ಡೆಪ್ಪ ಭಜಂತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ. 

ಮುಖ್ಯ ಅಥಿತಿಗಳಾಗಿ ಅ.ಕ.ಕು.ಮ ಸಂಘದ ರಾಜ್ಯಾದಕ್ಷರಾದ ಶಿವಾನಂದ ಭಜಂತ್ರಿ,  ಅ.ಕ.ಕೊ.ಸಂಘದ ರಾಜ್ಯಾದಕ್ಷರಾದ ಜಿ.ಮಾದೇಶ, ಉಪನಿರ್ದೇಶಕರು ಮ.ಮ.ಮ.ಅ.ಇ ಚಿಕ್ಕಮಂಗಳೂರ ಮಹಾಂತೇಶ ಭಜಂತ್ರಿ, ಶಿಂದಿಕುರಬೇಟ ಗ್ರಾ.ಪಂ ಅಧ್ಯಕ್ಷೆ ಸುಮಿತ್ರಾ ಮಾಯೆಣ್ಣಿ, ಉಪನ್ಯಾಸಕರಾಗಿ ದಾರವಾಡದ ಸಾಹಿತಿಗಳಾದ ವಾಯ್‌.ಎಮ್‌. ಭಜಂತ್ರಿ ಅಗಮಿಸಲಿದ್ದಾರೆ. 

ವಿಶೇಷ ಅಹ್ವಾನಿತರಾಗಿ ಬೆಳಗಾವಿ ಕ.ಸಂ.ಇ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಘಟಪ್ರಭಾದ ಖ್ಯಾತ ವಕೀಲರಾದ ಎಮ್‌.ಆರ್‌.ಭಜಂತ್ರಿ, ಸುಭಾಸ ಭಜಂತ್ರಿ, ಅಶೋಕ ಭಜಂತ್ರಿ, ನಾರಾಯಣ ಭಜಂತ್ರಿ, ಹಣಮಂತ ಭಜಂತ್ರಿ, ರಾಮಜಿ ಭಜಂತ್ರಿ, ಚಂದ್ರಶೇಖರ ಸುಖಸಾರೆ, ಮುತ್ತೆಪ್ಪ ಭಜಂತ್ರಿ, ಶ್ರೀಶೈಲ ಬಜಂತ್ರಿ, ಜಾವೇದ ಗೋಕಾಕ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಸುದ್ದಿ ಓದಿ