ಕಾರವಾರ

ಬನವಾಸಿಯಲ್ಲಿ 77 ಜನರಿಗೆ ಕೊರೊನಾ ಪಾಸಿಟಿವ್

ಬನವಾಸಿಯಲ್ಲಿ 77 ಜನರಿಗೆ ಕೊರೊನಾ ಪಾಸಿಟಿವ್

ಬನವಾಸಿ 20: ಬನವಾಸಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುರುವಾರ ಒಂದೇ ದಿನ 77 ಜನರಿಗೆ ಕೊರೊನಾ ಧೃಡಪಟ್ಟಿದೆ. 

ಬನವಾಸಿ 35, ಭಾಶಿ 13, ಅಜ್ಜರಣಿ 25, ನವಣಗೇರಿ 02, ಮುತಾಳಕೊಪ್ಪದ ಇಬ್ಬರಿಗೆ ಕೊರೊನಾ ಧೃಡಪಟ್ಟಿದ್ದು. ಹಳ್ಳಿಗಳಲ್ಲಿ ಆತಂಕದ ವಾತವಾರಣ ಸೃಷ್ಟಿಯಾಗಿದೆ. ಅತಿ ಹೆಚ್ಚು ಕೊರೊನಾ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಗುಡ್ನಾಪೂರ ಪಂಚಾಯತ್‌ನ ಅಜ್ಜರಣಿ ಗ್ರಾಮವನ್ನು ಪಂಚಾಯತ್ ಆಧಿಕಾರಿಗಳು ಸೀಲ್‌ಡೌನ್ ಮಾಡಿದರು. ಈ ಸಂದರ್ಭದಲ್ಲಿ ಗುಡ್ನಾಪೂರ ಪಂಚಾಯತ್ ಪಿಡಿಓ ಮಾರುತಿ ವಡ್ಡರ, ಬನವಾಸಿ ಪೊಲೀಸ್ ಠಾಣೆಯ ಪಿಎಸ್‌ಐ ಹನುಮಂತ ಬಿರಾದಾರ, ಕಂದಾಯ ಇಲಾಖೆಯ ನಾರಾಯಣ ಸ್ವಾಮಿ ಮತ್ತಿತರರು ಇದ್ದರು.   


ಸುದ್ದಿ ಓದಿ