ಪೃಥ್ವಿ ಸೆಂಟ್ರಲ್ ಸ್ಕೂಲನಲ್ಲಿ 75ನೇ ಗಣರಾಜ್ಯೋತ್ಸವ ಸಮಾರಂಭ
ಯರಗಟ್ಟಿ 28: ವೈವಿಧ್ಯಮಯ, ಸಾಂಸ್ಕೃತಿಕ, ಧಾರ್ಮಿಕ ಪರಂಪರೆ, ಬೃಹತ್ ಜನಸಂಖ್ಯೆ, ಹೋರಾಟದ ಹಿನ್ನಲೆ ಹೊಂದಿರುವ ನಮ್ಮ ದೇಶದ ಪ್ರತಿಯೊಬ್ಬ ಪ್ರಜೆ ಸಂವಿಧಾನದ ಆಶಯಗಳಲ್ಲಿ ಬಾಳುವದರಿಂದ ದೇಶದ ಮುನ್ನಡೆಗೆ ಸಹಕಾರಿ ಯಾಗುತ್ತದೆ ಎಂದು ವೇಂಕಟೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಲಕ್ಷ್ಮಿ ಎಲ್ ಕಳ್ಳಿಗುದ್ದಿ ಹೇಳಿದರು.
ಸ್ಥಳೀಯ ಪೃಥ್ವಿ ಸೆಂಟ್ರಲ್ ಸ್ಕೂಲನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ತನ್ನದೇಯಾದ ಸಂವಿಧಾನ ರಚನೆಯಾಗಿರಲಿಲ್ಲ. ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಅಧ್ಯಕ್ಷತೆಯಲ್ಲಿ ಹಲವು ವಿಚಾರವಂತರು ಕೂಡಿ ಸಂವಿಧಾನ ರಚಿಸಿ, 1950 ಜನವರಿ 26 ರಂದು ಸಂವಿಧಾನ ಜಾರಿಗೊಳಿಸಲಾಯಿತು. ಭಾರತ ಸಂವಿಧಾನವು ಜಗತ್ತಿನ ಶ್ರೇಷ್ಠ ಸಂವಿಧಾನವಾಗಿದ್ದು, ಪ್ರಜಾಪ್ರಭುತ್ವ ಮೌಲ್ಯಗಳಾದ ಸ್ವಾತಂತ್ರ್ಯ ಸಮಾನತೆ, ಸಹೋದರತೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಾಮರಸ್ಯ, ಜಾತ್ಯತೀತ ತತ್ವ, ವ್ಯಕ್ತಿಯ ಘನತೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಆದರ್ಶಗಳನ್ನೊಳಗೊಂಡಿದೆ ಎಂದರು.
ಪ್ರಾಚಾರ್ಯ ಬಸನಗೌಡ ಅಣ್ಣಿಗೇರಿ ಮಾತನಾಡಿ, ಯುವಜನತೆ ನಮ್ಮ ದೇಶದ ಭವಿಷ್ಯವಾಗಿದ್ದು, ತಾವು ಶಿಕ್ಷಣ ಮತ್ತು ಉದ್ಯೋಗದ ಜೊತೆಗೆ ಸಂವಿಧಾನದ ಆಶಯಗಳನ್ನು ಅರ್ಥಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಉದಾತ್ತ ಬದುಕಿನ ಮೂಲಕ ಪ್ರತಿಯೊಬ್ಬರೂ ತಾಯ್ನಾಡಿನ ಉನ್ನತಿಗೆ ದುಡಿದರೆ ನಮ್ಮ ಹಿರಿಯರು ಕಂಡಿದ್ದ ಸಮಾಜ ನಿರ್ಮಾಣದ ಕನಸು ನನಸಾಗುತ್ತದೆ. ಈ ಆಶಯ ಪೂರ್ಣಗೊಳ್ಳಲು ವೇಂಕಟೇಶ್ವರ ಶಿಕ್ಷಣ ಸಂಸ್ಥೆಸದಾ ನಿಮ್ಮೊಂದಿಗೆ ಇರುತ್ತೆ ಎಂದರು.
ಶಾಲೆಗೆ ಕಲಿಕೋಪಕರಣ ನೀಡಿದ ಚೌದರಿ ಕುಟುಂಭಸ್ಥರನ್ನು ಸನ್ಮಾನಿಸಲಾಯಿತು.
ಮುತ್ತೊಟ ಪೈನಾನ್ಸ ವ್ಯವಸ್ಥಾಪಕ ಮಹಾಂತೇಶ ಜ್ಯೋತೆನ್ನವರ, ಕೃಷ್ಣಾ ಗಿರೆನ್ನವರ, ರಘು ನಾಯ್ಕರ, ಶಿಕ್ಷಕಿ ಸವಿತಾ ದೆವರೆಡ್ಡಿ, ಲಕ್ಷ್ಮಿ ಗುನಕಿ, ಕಮಲಾ ಕಳಗಿಮಠ, ಪ್ರೀಯಾಂಕಾ ರಾಯರ, ರುದ್ರ್ಪ ಗಸ್ತಿ, ಕೃಷ್ಣಾಜಿ ಇಂಗಳೆ, ರುಪಾ ಕತ್ತಿ, ಶಿಲ್ಪಾ ಪತ್ತಾರ, ಶ್ರದ್ಧಾ ಬಾಳಿ, ನಿಲೋಪರ್ ತೊಟಗಿ, ಸುಮೇಶಾಲ, ಅಡ್ಲಿನ್ ಲಿಯೋನಡಾದ, ಈರಮ್ಮ ಬಾಳಿಕಾಯ, ಸಕ್ಕೂಬಾಯಿ ದಾಸರ ಸೇರಿದಂತೆ ವಿದ್ಯಾರ್ಥಿಗಳು ಸಿಬ್ಬಂದಿ ಇದ್ದರು.