ಆಟೋ ಚಾಲಕರಿಂದ 75ನೇ ಸ್ವಾತಂತ್ರ್ಯೋತ್ಸವ
ಶಿಗ್ಗಾವಿ : ಪಟ್ಟಣದ ಹೊಸ ಬಸ ನಿಲ್ದಾಣದ ಹತ್ತಿರವಿರುವ ಶಂಕರನಾಗ ಆಟೋ ಮಾಲಕರು ಮತ್ತು ಚಾಲಕರು 75ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮವನ್ನು ಪಾರಿವಾಳಗಳು ಹಾರಿಸುವ ಮೂಲಕ ನೇರವೇರಿಸಿದರು. ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ತಾಲೂಕ ಅಧ್ಯಕ್ಷ ದುರಗಪ್ಪ ವಡ್ಡರ, ದುಂಡಿಗೌಡ್ರ, ಹನುಮಂತ ಬಂಡಿವಡ್ಡರ, ಶಂಕರ ವಡ್ಡರ, ಜಯಪ್ಪ ನಂದಿ, ನಾಗರಾಜ ಹಾವಣ್ಣನವರ, ಸುರೇಶ ಭದ್ರಾಪೂರ, ಸುನೀಲ ಭದ್ರಾಪೂರ, ಇಮ್ತಿಯಾಜ, ಗೌಸಮುನ್ನಾ ಸೇರಿದಂತೆ ಆಟೋ ಚಾಲಕರು ಉಪಸ್ಥಿತರಿದ್ದರು.