75ನೇ ಸ್ವಾತಂತ್ರ್ಯ ದಿನಾಚರಣೆ
ಶಿಗ್ಗಾವಿ 17 : ಸ್ವಾತಂತ್ರ್ಯ ದಿನಾಚರಣೆ ನಮಗೆ ಸಡಗರ ಸಂಭ್ರಮವಾಗಬೇಕಿತ್ತು, ಮಕ್ಕಳ ಕಲರವ ಆಕಾಶದೆತ್ತರಕ್ಕೆ ಮುಟ್ಟಬೇಕಿತ್ತು ಆದರೆ ಇಂದು ಮಕ್ಕಳಿದೆ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿದ್ದು ಬೆಸರ ತಂದಿದೆ ಈ ಕರೋನ ಬೇಗ ನಿಲ್ಲಲಿ ಮತ್ತೆ ಶಾಲೆ ಪ್ರಾರಂಭವಾಗಲಿ ಎಂದು ಎಸ್ಡಿಎಮ್ಸಿಯ ಅಧ್ಶಕ್ಷ ದಾದಾಪೀರ ಹುಲಗೂರ ಹೇಳಿದರು.
ತಾಲೂಕಿನ ತಿಮ್ಮಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು.
ಶಾಲೆಯ ಪ್ರಧಾನಗುರುಗಳಾದ ಎಸ್.ಬಿ.ಕಾಳೆ ಮಾತನಾಡಿ ನಾಗರಾಜ ಮತ್ತಿಗಟ್ಟಿ ಅವರು ಸಂಗೋಳ್ಳಿ ರಾಯಣ್ಣ ಪ್ರತಿಮೆಯನ್ನು ಶಾಲೆ ನೀಡಿದ್ದು ಬಹಳ ಸಂತೋಷದ ವಿಷಯ. ರಾಯಣ್ಣನ ಗುಣಗಳು ಚನ್ನಮ್ಮನ ಧೈರ್ಯ ನಮ್ಮಲ್ಲಿ ಬೆಳೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ಡಿಎಮ್ಸಿಯ ಸರ್ವ ಸದಸ್ಶರು ಮತ್ತು ಶಿಕ್ಷಕರಾದ ಆರ್.ಆರ್ ಬಾರಕೇರ, ಎಸ್.ಜಿ.ಕರ್ಜಗಿ, ಆರ್.ಎಂ.ಹಾರೋಗೇರಿ, ಮಹಾಂತೇಶ ನಾಯ್ಕೋಡಿ, ತಾರಾಮತಿ ಮಾಳಗಿ, ಶಾಂತಲಾ ಹರಮಗಟ್ಟಿ, ಸುಮಾ ನವಾತಿ ಇದ್ದರು.