75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ
ಶಿಗ್ಗಾವಿ 17: ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಈ ದೇಶಕ್ಕಾಗಿ ನಾವೇನು ಮಾಡಿದ್ದೇವೆ ಏನು ಮಾಡಬೇಕು ಎಂಬ ಮನೋಭಾವನೆ ಬೆಳೆಸಿಕೊಳ್ಳಿ ಎಂದು ಜಾನಪದ ಕಲಾವಿದೆ ಭಾರತಿ ಛಬ್ಬಿ ಹೇಳಿದರು.
ತಾಲೂಕಿನ ಹೊಸೂರ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ನಡೆದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಧುಸೂದನ್ ಛಬ್ಬಿ ಸೇವಾ ಸಂಸ್ಥೆ ವತಿಯಿಂದ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳು ಶೇಕಡಾ 90 ಕ್ಕಿಂತ ಹೆಚ್ಚು ಅಂಕ ಪಡೆದ ಆರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿ ಪ್ರಮಾಣ ಪತ್ರ ಧನಸಹಾಯವನ್ನು ನೀಡಿ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ ತಂದೆ-ತಾಯಿಗೆ ಗುರುಗಳಿಗೆ ಹಿರಿಯರಿಗೆ ವಿಧೇಯಕರಾಗಿ ದೇಶಭಕ್ತಿ ಮತ್ತು ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದರು.
ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಖೋಮರ್ ಹಾಗೂ ಸಹ ಶಿಕ್ಷಕ ಶಿಕ್ಷಕಿಯರು ಎಸ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಛಬ್ಬಿ ಸೇವಾಸಂಸ್ಥೆ ಕಾರ್ಯದರ್ಶಿ ನಾಗರಾಜ ಛಬ್ಬಿ ಖಜಾಂಚಿ ಭಾರತಿ ಛಬ್ಬಿ ಹಿರಿಯರಾದ ದೇವೇಂದ್ರ್ಪ ಛಬ್ಬಿ ಹಾಗೂ ಗ್ರಾಮದ ಪ್ರಕಾಶ್ ದೌಗಿ ಗಣ್ಯಮಾನ್ಯರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ನಾಗರಾಜ ಛಬ್ಬಿ ಕಾರ್ಯಕ್ರಮ ನಿರ್ವಹಿಸಿದರು.