75ನೇ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ
ಸಿರುಗುಪ್ಪ 28: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರೂಜೀ, ಬಾಬು ರಾಜೇಂದ್ರ್ರಸಾದ್, ಮೌಲಾನಾ ಅಬುಲ್ ಕಲಾಂ ಆಜಾದ್, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಗಡಿನಾಡ ಗಾಂಧಿ ಅಬ್ದುಲ್ ಗಫಾರ್ ಖಾನ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಮೊದಲಾದವರು ಸೇರಿದಂತೆ ದೇಶಕ್ಕಾಗಿ ಜೀವನವನ್ನೇ ಸವೆಸಿದ ಪ್ರತಿಮಾ ಮಹನೀಯರನ್ನು ನೆನಪಿಸುವ ಗೌರವಿಸುವ ಸ್ಮರಿಸಬಹುದಾಗಿದೆ ಎಂದು ಶಾಸಕ ಎಂ ಎಸ್ ಸೋಮಲಿಂಗಪ್ಪ ಹೇಳಿದರು.
ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಕರ್ನಾಟಕ ಸರಕಾರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಹಾಗೂ ನಗರಸಭೆ ಸಿರುಗುಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಅಮೃತ ಮಹೋತ್ಸವ 75ನೇ ಸ್ವಾತಂತ್ರ್ಯ ಅಮೃತ ಭಾರತಿ ಕನ್ನಡ ಆರತಿ ತ್ಯಾಗ ಬಲಿದಾನಗಳ ಸ್ಮರಣೆ ನಡೆದ ಹೋರಾಟಗಳಿಂದ ಪ್ರೇರಣೆ ಆದರ್ಶಗಳ ಅದರ ಅನುಸರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಮಹಾತ್ಮರ ಸ್ವತಂತ್ರ್ಯ ಚಳುವಳಿಗೆ ಪ್ರೇರಣೆಯಾದ ತತ್ವ ಸಿದ್ಧಾಂತಗಳು ಇಂದು ಭವ್ಯ ಭಾರತ ನಿರ್ಮಾಣಕ್ಕೆ ದಾರೀದೀಪ ವಾಗಿವೆ ಎಂದು ಶಾಸಕರು ಹೇಳಿದರು.
ನಗರಸಭೆ ಅಧ್ಯಕ್ಷೆ ಕೆ ಸುಶೀಲಮ್ಮ ವೆಂಕಟರಾಮ್ ರೆಡ್ಡಿ, ಬಳ್ಳಾರಿ ಸಾಮಾಜಿಕ ಕಾರ್ಯಕರ್ತ ಅಡವಿಸ್ವಾಮಿ, ಯುವ ಮುಖಂಡ ಎಂ ಎಸ್ ಸಿದ್ದಪ್ಪ, ಲೋಕಶಿಕ್ಷಣ ನಿರ್ದೇಶನಾಲಯ ಬಳ್ಳಾರಿ ಜಿಲ್ಲಾ ಸಾಕ್ಷರತಾ ಸಮಿತಿ ಕಾರ್ಯಕಾರಿ ಸದಸ್ಯರು ಸಮಾಜ ಸುಧಾರಕರಾದ ಎ ಅಬ್ದುಲ್ ನಬಿ, ಮೇಕೇಲಿ ವೀರೇಶಿ,ಬಿಜೆಪಿ ತಾಲ್ಲೂಕು ಅಧ್ಯಕ್ಷ ಆರ್ ಸಿ ಪಂಪನಗೌಡ, ಉಪ ತಹಶೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ,ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ,ಸಹಾಯಕ ಕೃಷಿ ನಿರ್ದೇಶಕಿ ಬಿ ರಾಜೇಶ್ವರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಎ ಜಲಾಲಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ ಡಿ ಭಜಂತ್ರಿ, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ ಈರಣ್ಣ,ಉಪ ತಹಶೀಲ್ದಾರ್ ಎನ್ ಬಾಬು, ಕಂದಾಯ ಪರೀವೀಕ್ಷಕ ಮಂಜುನಾಥ, ನಗರಸಭೆ ಎಲ್ಲ ಸದಸ್ಯರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಪ್ರಮುಖ ಮುಖಂಡರು ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.