ಗಡಿಭಾಗದ ಗ್ರಾಮಗಳಲ್ಲಿ 70% ಮತದಾನ
ಶಂಬರಗಿ : ಕಾಗವಾಡ ವಿಧಾನ ಸಭಾ ವ್ಯಾಪ್ತಿಯಲ್ಲಿ ಬರುವ ಗಡಿಭಾಗದ ಗ್ರಾಮಗಳಲ್ಲಿ 65% ರಿಂದ 70% ಮತದಾನ ಚಲಾಯಿಸಿದರು ಆದರೆ ಬೆಳಗಿನ 12:00 ಯ ವರೆಗೆ ಮತದಾರಿಗೆ ಉತ್ಸಾಹ ವಿರುತ್ತಿರಲಿಲ್ಲ ಮಧ್ಯಾಹ್ನದ ನಂತರ ಮತ ಚಲಾಯಿಸಿದರ ಮತದಾರರು ಸಾಲಾಗಿ ನಿತ್ತು ಮತ ಚಲಾಯಿಸಿದರು. ಗಡಿಭಾಗದ ಪ್ರತಿಯೋಂದು ಮತದಾನದ ಕೇಂದ್ರಲ್ಲಿ ಪೋಲಿಸ ಬಿಗಿ ಭದ್ರತೆ ಒದಗಿಸದಿರು.
ಸಂಬರಗಿ, ಶಿರೂರ, ಪಾಂಡೇಗಾಂವ, ಖಿಲೇಗಾಂವ, ಆನಂತಪೂರ, ತವಂಶಿ, ನಾಗನೂರ, ಜಂಬಗಿ, ಅರಳಿಹಟ್ಟಿ ಸೇರದಂತ ಈ ಭಾಗದ ಗ್ರಾಮಗಳಲ್ಲಿ 70% ರಿಂದ 72% ಪ್ರತಿಶತ ಮತದನ ಮಾಡಲಾಗಿದೆ. ಅನಂತಪೂರ ಹಾಗೂ ಮದಭಾವಿ ಚಿಲ್ಲಾಪಂಚಾಯತ ವ್ಯಾಪ್ತಿಯಲ್ಲಿ ಮಧ್ಯಹ್ನಾ 2:00 ರಂದ 6 :00 ಗಂಟೆಯವರೆಗೆ ಕೂಲಿ ಕೆಲಸಮಾಡಿ ಬಂದು ಮತ ಚಲಾಯಿಸಿದರು.
ಬಿಜೆಪಿ. ಹಾಗೂ ಕಾಂಗ್ರೇಸ್ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯಥರ್ಿಗೆ ಮತ ಹಾಕಲು ಪ್ರಯತ್ನ ಮಾಡಿ ಮತ ಚಲಾಯಿಸಿದರು. ಈ ಭಾಗದಲ್ಲಿ ಒಳ್ಳೆಯ ಮತದಾನವಾಗಿದೆ. ಸಂಬರಗಿ ಮತಗಟ್ಟೆಯಲ್ಲಿ ಪ್ರಥಮವಾಗಿ ಪುಣೆ ವಿಶೇಷ ಪೋಲಿಸ ತಂಡ ಬಂದು ಬಿಗ ಭದ್ರತೆ ವಹಿಸಿದರು. ಮತದಾರರಿಗೆ ಪರೀಶಿಲನೆಮಾಡಿ ಮತದಾರರಿಗೆ ಮತ ಚಲಾಯಿಸಲು ಅನಕುಲ ಮಾಡಿಕೊಟ್ಟರು. ಬೀಗಿ ಭದ್ರತೆವಹಿಸಿದರು. ಮತದಾರರಿಗಗೆ ಸಾಲಿನಲ್ಲಿ ನಿಲ್ಲಿಸಿ ಮತ ಚಲಾಯಿಸಲು ತಿಳಿಸಿದರು.
ಜಂಬಗಿ ಗ್ರಾಮದ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾದ 99 ವರ್ಷದ ವೃದ್ಧ ಮಹಿಳೆ ನೀಲವ್ವ ಮಾಳಿ ಮತಗಟ್ಟೆಯಲ್ಲಿ ಹೋಗಿ ಮತ ಚಲಾಯಿಸಿದರು ಈ ವೇಳೆ ಗ್ರಾಮ ಲೇಕ್ಕಾಧಿಕಾರಿ ಗೋಪಾಲ ಜಾಧವ, ಗೋವಿಂದ ಪಾಟೀಲ, ಎಸ್.ಎಸ್. ಕನ್ನೂರೆ ಉಪಸ್ಥಿತರಿದ್ದರ. ಈ ಭಾಗದಲ್ಲಿ ಮತದಾನ ಶಾಂತ ರೀತಿಯಲ್ಲಿ ಮತದಾನವಾಗಿದೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ.