ಶಿಗ್ಗಾವ್

ಮೋದಿ ಸರ್ಕಾರಕ್ಕೆ 7ವರ್ಷ: ಬಡ ಕುಟುಂಗಳಿಗೆ ಕಿಟ್ ವಿತರಣೆ

ಮೋದಿ ಸರ್ಕಾರಕ್ಕೆ 7ವರ್ಷ: ಬಡ ಕುಟುಂಗಳಿಗೆ ಕಿಟ್ ವಿತರಣೆ

ಶಿಗ್ಗಾವಿ 31: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಎರಡನೇಯ ಅವಧಿಯ ಎರಡು ವರ್ಷ ಪೊರೈಸಿದ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಶಿಗ್ಗಾವಿ ಹಾಗೂ ಬಸವರಾಜ ಬೊಮ್ಮಾಯಿ ಮತ್ತು ಪ್ರಲ್ಹಾದ ಜೋಶಿ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ 23ನೇ ವಾರ್ಡಿನ ಮಾರುತಿ ನಗರದಲ್ಲಿರುವ ನಿರ್ಗತಿಕ ಕುಟುಂಬಸ್ಥರಿಗೆ ಮಂಡಲ ಅಧ್ಯಕ್ಷ ಶಿವಾನಂದ ಮ್ಯಾಗೇರಿ ನೇತೃತ್ವದಲ್ಲಿ ಕಿರಾಣಿ ಕಿಟ್, ಬೆಡಶೀಟ್, ಮಾಸ್ಕ್‌, ಸ್ಯಾನಿಟೈಜರಗಳನ್ನು ವಿತರಿಸಿ ಸಂಭ್ರಮಾಚರಣೆ ಆಚರಿಸಲಾಯಿತು. 

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಭಾಜಪ ಕಾರ್ಯದರ್ಶಿ ಬಸವರಾಜ ನಾರಾಯಣಪೂರ, ಭಾಜಪ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರತೀಕ ಕೋಳೆಕಾರ, ಮಕ್ಬುಲ್ ದೊಡ್ಡಮನಿ, ಪ್ರಶಾಂತ ಬಡ್ಡಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ