ಹೂವಿನ ಹಡಗಲಿ

ಬೆಳೆ ವಿಮೆಯಲ್ಲಿ ರೈತರ ಕಡೆಯಿಂದ ಶೇ.60ರಷ್ಟು ಹಣ ವಸೂಲಿ; ಕ್ರಮಕ್ಕೆ ಸೂಚನೆ

ಬೆಳೆ ವಿಮೆಯಲ್ಲಿ ರೈತರ ಕಡೆಯಿಂದ ಶೇ.60ರಷ್ಟು ಹಣ ವಸೂಲಿ; ಕ್ರಮಕ್ಕೆ ಸೂಚನೆ

ಬೆಳೆ ವಿಮೆಯಲ್ಲಿ ರೈತರ ಕಡೆಯಿಂದ ಶೇ.60ರಷ್ಟು ಹಣ ವಸೂಲಿ; ಕ್ರಮಕ್ಕೆ ಸೂಚನೆ 

ಹೂವಿನಹಡಗಲಿ 06: ತಾಲ್ಲೂಕಿನಲ್ಲಿ ಬೆಳೆ ವಿಮೆ ಯೋಜನೆಯಲ್ಲಿ ಸಾಕಷ್ಟು ? ವ್ಯವಹಾರ ನಡೆದಿದ್ದು, ಮಧ್ಯವರ್ತಿಗಳು ಮುಗ್ಧ ರೈತರನ್ನು ವಂಚಿಸುತ್ತಿದ್ದರೆಂದು ಕೂಡಲೇ  ಅಂಥವರನ್ನು ಪತ್ತೆ ಹಚ್ಚಿ, ಎಫ್‌ಐಆರ್ ದಾಖಲಿಸಬೇಕು ಎಂದು ಶಾಸಕ ಎಲ್‌. ಕೃಷ್ಣನಾಯಕ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕು ಪಂಚಾಯಿತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಮಂಗಳವಾರ ತ್ರೈಮಾನಿಕ ಕೆಡಿಪಿ ಪ್ರಗತಿ ಪರೀಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.’ವಿಮಾ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿರುವ ಮಧ್ಯವರ್ತಿಗಳು ರೈತರನ್ನು ನಂಬಿಸಿ ದಾಖಲೆ ಪಡೆದು ಅವರ ಪರವಾಗಿ ಕಂತು ಪಾವತಿಸುತ್ತಾರೆ. ರೈತರ ಖಾತೆಗೆ ವಿಮಾ ಪರಿಹಾರ ಜಮೆ ಆಗುತ್ತಿದ್ದಂತೆ ರೈತರ ಕಡೆಯಿಂದ ಶೇ.60ರಷ್ಟು ಹಣ ವಸೂಲಿ  ಮಾಡುತ್ತಿದ್ದಾರೆ  ಎಂದು  ದೂರಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.  

ತಾಲ್ಲೂಕಿನಲ್ಲಿ  ಮಾಫಿಯಾ ಸ್ವರೂಪ ಪಡೆದಿದೆ. ರೈತರನ್ನು ವಂಚಿಸಿರುವ ಮಧ್ಯವರ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ಉನ್ನತ ತನಿಖೆ ನಡೆಸಬೇಕು’ ಎಂದು ಸೂಚಿಸಿದರು. ಕೃಷಿ, ತೋಟಗಾರಿಕೆ ಇಲಾಖೆಯಲ್ಲಿ ಅನೇಕ ಉಪಯುಕ್ತ ಯೋಜನೆಗಳಿವೆ. ಮಾಹಿತಿ ಕೊರತೆಯಿಂದ ಅವು ರೈತರಿಗೆ ತಲುಪುತ್ತಿಲ್ಲ. ಬಳಕೆಗೆ ಸೀಮಿತವಾಗದೇ ರೈತರಿಗೆ ಅನುಕೂಲವಾಗುವಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕು. ಸೌಲಭ್ಯಗಳ ಕುರಿತು ವ್ಯಾಪಕ ಪ್ರಚಾರ ಮಾಡಬೇಕು ಎಂದು ತಿಳಿಸಿದರು.’ಶಿಕ್ಷಣ ಕ್ಷೇತ್ರಕ್ಕೆ ನಾನು ಹೆಚ್ಚು ಅನುದಾನ ವಿನಿಯೋಗಿಸಿದ್ದೇನೆ. ಸರ್ಕಾರದ ಐಎಎಸ್, ಕೆಎಎಸ್ ತರಬೇತಿಗೆ ಇಲ್ಲಿನ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗದಿರುವುದು ಬೇಸರ ಮೂಡಿಸಿದೆ. ಇಲ್ಲಿನ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದಾರೆ.  

ಸಮಾಜ ಕಲ್ಯಾಣ ಮತ್ತು ಬಿಸಿಎಂ ಇಲಾಖೆ ಅಧಿಕಾರಿಗಳು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಹೆಚ್ಚು ವಿದ್ಯಾರ್ಥಿ ಗಳು ಆಯ್ಕೆಯಾಗುವಂತೆ ಅಣಿಗೊಳಿಸಬೇಕು. ಎಂದು ಸೂಚಿಸಿದರು.’ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ. ಒಂದು ಗ್ರಾಮ ಪಂಚಾಯಿತಿ ಯನ್ನು ಆಯ್ಕೆಮಾಡಿ ಕೊಂಡು ಎಲ್ಲ ನಾಯಿಗಳಿಗೆ ರೇಬಿಸ್ ಲಸಿಕೆ ಮತ್ತು ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಬೇಕು. ಇದು ಯಶಸ್ವಿಯಾದಲ್ಲಿ ಎಲ್ಲ ಪಂಚಾಯಿತಿಗಳಿಗೂ ವಿಸ್ತರಿಸು ತ್ತೇವೆ. ಪಶು ಸಂಗೋಪನೆ ಇಲಾಖೆಯ ವರು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ತಾ.ಪಂ. ಇಒ ಎಂ. ಉಮೇಶ್ ತಿಳಿಸಿದರು.ಸಭೆಗೆ ಗೈರಾಗಿದ್ದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಶಾಸಕರು ಸೂಚಿಸಿದರು. ನೀಡಲುಅಶೋಕ ತೋಟದ 


ಸುದ್ದಿ ಓದಿ