ರಾಣೆಬೆನ್ನೂರ

ಬಿಜೆಪಿ ಕಾರ್ಯಾಲಯದಲ್ಲಿ 41ನೇ ಸಂಸ್ಥಾಪನಾ ದಿನಾಚರಣೆ

ಬಿಜೆಪಿ ಕಾರ್ಯಾಲಯದಲ್ಲಿ 41ನೇ ಸಂಸ್ಥಾಪನಾ ದಿನಾಚರಣೆ
ರಾಣೀಬೆನ್ನೂರ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ 41ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖಂಡರು.

ರಾಣೇಬೆನ್ನೂರ 06: ಇಲ್ಲಿನ ಭಾರತೀಯ ಜನತಾ ಪಕ್ಷದ ಕಚೇರಿ ಕಾರ್ಯಾಲಯದಲ್ಲಿ ಪಕ್ಷದ 41ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಅತ್ಯಂತ ಸರಳವಾಗಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿ ಮಹಾಶಕ್ತಿ ಕೇಂದ್ರದ ಪ್ರಮುಖ ಮತ್ತು ಪದಾಧಿಕಾರಿಗಳ ಮನೆಗಳ ಮೇಲೆ ಧ್ವಜಾರೋಹಣ ನೆರವೇರಿಸಿ  ಸಂಭ್ರಮಿಸಲಾಯಿತು. 

ನಗರ ಮಂಡಲದ ಅಧ್ಯಕ್ಷ ದೀಪಕ್ ಹರಪನಹಳ್ಳಿ, ಜಿಲ್ಲಾ ಕಾರ್ಯದರ್ಶಿ ಸಂತೋಷ ಆಲದಕಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಮೇಶ ಗುತ್ತಲ, ಅನಿಲಕುಮಾರ ಸಿದ್ದಾಳಿ, ರಾಜ್ಯ ನೇಕಾರ ಪ್ರಕೋಷ್ಠದ ಸಂಚಾಲಕ ಡಾ.ಬಸವರಾಜ ಕೇಲಗಾರ, ಪಕ್ಷದ ಮುಖಂಡರಾದ ನ್ಯಾಯವಾದಿ ಕೆ.ಶಿವಲಿಂಗಪ್ಪ, ವಿಶ್ವನಾಥ ಪಾಟೀಲ, ಎ.ಬಿ.ಪಾಟೀಲ, ನಗರಸಭಾಧ್ಯಕ್ಷ ರೂಪಾ ಆರ್.ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಎಸ್.ಚಿಕ್ಕಬಿದರಿ, ಪ್ರಕಾಶ ಪೂಜಾರ, ಮಂಜುಳಾ ಹತ್ತಿ, ಶೇಖಪ್ಪ ನರಸಗೊಂಡರ, ಗಂಗಮ್ಮ ಹಾವನೂರ, ಮೈಲಪ್ಪ ಗೋಣಿಬಸಮ್ಮನವರ, ಗೀತಾ ಜಂಬಗಿ, ಮಮತಾ ಜಾದವ, ಶಿವಯೋಗಿ ಹಳ್ಳಳ್ಳಿ, ಯುವರಾಜ ಬಾರಾಟಕ್ಕಿ, ಉಮೇಶ ಹೊನ್ನಾಳಿ ಸೇರಿದಂತೆ ತಾಲೂಕಿನ ಮತ್ತು ಜಿಲ್ಲೆಯ ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ