37 ದಿನಕ್ಕೆ ಕಾಲಿಟ್ಟ ಜೆಡಿಎಸ್ ಕಾರ್ಯಕರ್ತರು ಧರಣಿ
ಇಂಡಿ 06: ತಾಲೂಕು ಸಮಗ್ರ ನೀರಾವರಿ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧ ಎದುರು ನಡೆಯುತ್ತಿರುವ ಧರಣಿ 37 ದಿನಕ್ಕೆ ಮುಂದುವರೆದಿದೆ.
ಬುಧವಾರ ಪ್ರತಿಭಟನಾಕಾರರು ಅರೆ ಬೆತ್ತಲೆ ಪ್ರತಿಭಟನೆ ನಡೆಸಿದರು.
ಜೆ.ಡಿ.ಎಸ್ ಮುಖಂಡ ಬಿ.ಡಿ.ಪಾಟೀಲ ಮಾತನಾಡಿ ರೈತರು ನೀರಾಗಾಗಿ ಅರೆ ಬೆತ್ತಲೆ ಪ್ರತಿಭಟನೆ ಮಾಡುತ್ತಿರುವದು ದುರ್ದೈವ. ಸರಕಾರಕ್ಕೆ ಈ ಭಾಗಕ್ಕೆ ಇಂಡಿ ತಾಲೂಕಿನ ಕೃಷ್ಣಾ ಕಾಲುವೆಗಳಲ್ಲಿ ನೀರು ಹರಿಸುವ ಅವಶ್ಯಕತೆ ಇದೆ ಎಂದು ತಿಳಿಸಲು ಮಾಡುತ್ತಿದ್ದಾರೆ. ಸರಕಾರ ರೈತರ ಹೋರಾಟಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ಹೋರಾಟ ಇನ್ನಷ್ಟು ತೀರ್ವಗೊಳಿಸಲಾಗುವದು ಎಂದರು.
ಜೆಡಿ ತಾಲೂಕು ಉಪಾಧ್ಯಕ್ಷ ಬಸವರಾಜ ಹಂಜಗಿ ಮಾತನಾಡಿ ಇಂದಿನಿಂದ ಪ್ರತಿ ದಿನ ಎರಡು ಗ್ರಾಮಗಳಿಗೆ ಭೇಟಿ ನೀಡಿ ತಾಲೂಕಿನ ಸಮಗ್ರ ನೀರಾವರಿ ಕುರಿತು ಜಾಗೃತಿ ಮೂಡಿಸುತ್ತೇವೆ. ಗ್ರಾಮಸ್ಥರಿಗೆ ಹೋರಾಟ ಕುರಿತು ಮನವರಿಕೆ ಮಾಡಿಕೊಡುತ್ತೇವೆ. ಮತ್ತು ನೀರಾವರಿ ಒಳಪಡಿಸಲು ಹೋರಾಟ ತೀರ್ವ ಗೊಳಿಸಲು ಗ್ರಾಮಸ್ಥರಿಗೆ ಮನವರಿಕೆ ಮಾಡುತ್ತೇವೆ ಎಂದರು.
ಅರೆ ಬೆತ್ತಲೆ ಹೋರಾಟದಲ್ಲಿ ತಾಲೂಕಾ ಅಂಗವೀಕಲರ ಅಧ್ಯಕ್ಷ ಭರಮಲಿಂಗ ಪೂಜಾರಿ, ಬಸವರಾಜ ಹಂಜಗಿ, ಮಹಿಬೂಬ ಬೇವನೂರ, ಮಹಮ್ಮದ ಬಾಗವಾನ, ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಅಣ್ಣಪ್ಪ ಬಗಲಿ ಹಂಜಗಿ, ಇರಫಾನ್ ಅಗರಖೇಡ, ಜಾಕೀರ ಪಟೇಲ, ಬಂಡು ಪವಾರ, ಹಣಮಂತ ಹಿರೇಕುರಬರ, ನಿಯಾಝ ಅಗರಖೇಡ, ದುಂಡು ಬಿರಾದಾರ, ಮತ್ತಿತರಿದ್ದರು.