ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವ
ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವ
ಕಂಪ್ಲಿ 10: ಪಟ್ಟಣದ ಎಸ್‌ಎನ್‌ಪೇಟೆಯ ಜಗದ್ಗುರು ಶ್ರೀಮನ್ ಮದ್ವಾಚಾರ್ಯರ ಮೂಲ ಮಹಾಸಂಸ್ಥಾನದ ನಂಜನಗೂರು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಭಾನುವಾರದಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಯಿಂದ ಜರುಗಿದವು.
ಇಲ್ಲಿನ ದೇವಸ್ಥಾನದ ಸನ್ನಿಧಾನದಲ್ಲಿ ಬೆಳಿಗ್ಗೆ ಅಷ್ಟ್ರೋತ್ತರ ಸಹಿತ ಫಲ ಪಂಚಾಮೃತ, ಪುಷ್ಪಾಲಂಕಾರ, ಕನಕಾಭಿಷೇಕ, ಮಧ್ಯಾಹ್ನದ ಹಸ್ತೋದಕ, ಮಹಾಮಂಗಳಾರತಿ ನೆರವೇರಿದವು. ಇಲ್ಲಿನ ಆರಾಧನಾ ಮಹೋತ್ಸವ ಅಂಗವಾಗಿ ಭಕ್ತರು ಆಗಮಿಸಿ, ದರ್ಶನ ಪಡೆದುಕೊಂಡರು. ನಂತರ ಶ್ರೀಗುರುರಾಜ ಸೇವಾ ಮಂಡಳಿ ಹಾಗೂ ಮಹಿಳಾ ಭಜನಾ ಮಂಡಳಿಯವರಿಂದ ತೀರ್ಥ ಪ್ರಸಾದ ವ್ಯವಸ್ಥೆ ಮಾಡಿದದರು. ಭಕ್ತರು ಫಲ-ಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಸಂಜೆ ರಥೋತ್ಸವ, ಸ್ವಸ್ತಿವಾಚನ, ತೊಟ್ಟಲು ಸೇವಾ, ಮಹಾಮಂಗಳಾರತಿ ನೆರವೇರಿದವು.
ಈ ಸಂದರ್ಭದಲ್ಲಿ ಶ್ರೀಗುರುರಾಜ ಸೇವಾ ಮಂಡಳಿ ಹಾಗೂ ಮಹಿಳಾ ಭಜನಾ ಮಂಡಳಿಯವರು ಸೇರಿದಂತೆ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.