ಕಾರವಾರ

34,200 ರೂ ಮೌಲ್ಯದ ಗೋವಾ ಮದ್ಯ ವಶ

34,200 ರೂ ಮೌಲ್ಯದ ಗೋವಾ ಮದ್ಯ ವಶ

ಕಾರವಾರ 20: ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಟ್ಟ 34,200 ರೂ ಮೌಲ್ಯದ 14.250 ಲೀ. ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಫೆ. 17ರಂದು ಜಪ್ತಿ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕಾರವಾರ ತಾಲೂಕಿನ ಅಮದಳ್ಳಿ ಗ್ರಾಮದ ಚರ್ಚವಾಡದಲ್ಲಿನ ಫಿಲಿಸ್ ಬೋರ್ಜಿಸ್ ಎಂಬುವರು ತಮ್ಮ ಮನೆಯಲ್ಲಿ ಅಕ್ರಮಾಗಿ 34,200 ರೂ ಮೌಲ್ಯದ 14.250 ಲೀ. ಗೋವಾ ಮದ್ಯವನ್ನು ಮಾರಾಟಕ್ಕಾಗಿ ದಾಸ್ತಾನು ಮಾಡಿಟ್ಟಿದ್ದರು. ಅಬಕಾರಿ ಉಪ ಆಯುಕ್ತೆ ವನಜಾಕ್ಷಿ ಎಂ., ಉಪ ಅಧೀಕ್ಷಕಿ ಸುವರ್ಣಾ ಬಿ. ನಾಯ್ಕ ಅವರ ನಿರ್ದೇಶನದಂತೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಕಾರವಾರ ವಲಯದ ಅಬಕಾರಿ ನಿರೀಕ್ಷಕ ದಯಾನಂದ, ಉಪ ನಿರೀಕ್ಷಕ ಪ್ರವೀಣಕುಮಾರ ಕಲ್ಲೋಳ್ಳಿ, ಸಿಬ್ಬಂದಿ ಶಂಕರ ಚೌಗಲಾ, ಇಮ್ತಿಯಾಜ್ ಹಾಗೂ ಅಮದಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ನಾಯ್ಕ, ದ್ವಿತೀಯ ದರ್ಜೆ ಸಹಾಯಕ ಸಂತೋಷ ಗೌಡ ಅವರನ್ನೊಳಗೊಂಡ ತಂಡ ದಾಳಿ ನಡೆಸಿದ್ದಾರೆ. ಅಲ್ಲದೇ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಾರವಾರ ಅಬಕಾರಿ ವಲಯ ಕಚೇರಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ನೀರಿಕ್ಷಕ ದಯಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ