ಕಾರವಾರ

ಬನವಾಸಿಯಲ್ಲಿ 31 ಜನರಿಗೆ ಮಹಾಮಾರಿ ಕೊರೋನ

ಬನವಾಸಿಯಲ್ಲಿ 31 ಜನರಿಗೆ ಮಹಾಮಾರಿ ಕೊರೋನ

ಬನವಾಸಿ 28: ಪಟ್ಟಣದಲ್ಲಿ ಕೊರೋನಾ ಮಹಾಮಾರಿ ಅರ್ಭಟಿಸುತ್ತಿದ್ದು ಸಾರ್ವಜನಿಕರು ಎಚ್ಚರವಹಿಸಬೇಕು ಇಲ್ಲವಾದಲ್ಲಿ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಯಶ್ರೀ ಹೆಗಡೆ ತಿಳಿಸಿದರು. 

ಅವರು ಪತ್ರಿಕೆಗೆ ಮಾಹಿತಿ ನೀಡಿ ಬುಧವಾರ ಒಂದೇ ದಿನ 16 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಇಲ್ಲಿಯವರೆಗೆ ಒಟ್ಟು 31 ಜನರು ಮಹಾಮಾರಿ ಕೊರೋನಕ್ಕೆ ತುತ್ತಾಗಿದ್ದಾರೆ. ಸಾರ್ವಜನಿಕರು ಎಚ್ಚರವಹಿಸುವುದರೊಂದಿಗೆ ಈ ರೋಗ ಹಿಮ್ಮೆಟ್ಟಿಸಲು   ಸಾಮಾಜಿಕ ಅಂತರ, ಮಾಸ್ಕ್‌ ಉಪಯೋಗಿಸಿ ಅನಗತ್ಯವಾಗಿ ತಿರಗಾಡದೇ ಅಗತ್ಯವಿದ್ದಲ್ಲಿ ಮಾತ್ರ ಹೋರ ಬರಬೇಕು ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಸಲಹೆ ಪಡೆದು ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿಕೊಳ್ಳ ಬೇಕು ಎಂದು ಹೇಳಿದರು. 


ಸುದ್ದಿ ಓದಿ