ಕಾರವಾರ

ಮಾನವ ಹಕ್ಕುಗಳ ಆಯೋಗದ ಎದುರು 3000 ಪ್ರಕರಣಗಳು ಇತ್ಯರ್ಥಕ್ಕೆ ಕಾದಿವೆ : ಡಾ.ಟಿ . ಶ್ಯಾಮ್ ಭಟ್

ಮಾನವ ಹಕ್ಕುಗಳ ಆಯೋಗದ ಎದುರು 3000 ಪ್ರಕರಣಗಳು ಇತ್ಯರ್ಥಕ್ಕೆ ಕಾದಿವೆ : ಡಾ.ಟಿ . ಶ್ಯಾಮ್ ಭಟ್

ಕಾರವಾರ  29:  ಕರ್ನಾಟಕದಲ್ಲಿ 2007 ರಿಂದ ಮಾನವ ಹಕ್ಕುಗಳ ಆಯೋಗ ಕಾರ್ಯನಿರ್ವಹಿಸುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ಕಂಡು ಬಂದಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತೇವೆ ಎಂದು  ಆಯೋಗದ ಹಂಗಾಮಿ ಅಧ್ಯಕ್ಷ ಡಾ.ಟಿ . ಶ್ಯಾಮ್ ಭಟ್  ಹೇಳಿದರು. ಕಾರವಾರದ ಜಿಲ್ಲಾ ಪಂಚಾಯತ ಸಭಾಭವನದಲ್ಲಿ  ಬುಧುವಾರ  ಮಾನವ ಹಕ್ಕುಗಳ ಎದುರು ದಾಖಲಾಗಿರುವ ಪ್ರಕರಣಗಳ ಸ್ಥಿತಿ ಗತಿ ಪರೀಶೀಲನೆ ಮಾಡಿದ ನಂತರ   ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. 2023 ರಿಂದ ನವ್ಹೆಂಬರ್ ನಲ್ಲಿ ಹಂಗಾಮಿ ಅಧ್ಯಕ್ಷನಾಗಿ  ಅಧಿಕಾರ ಸ್ವೀಕರಿಸಿ ಕೆಲಸ ಮಾಡುತ್ತಿದ್ದೇನೆ.

ಹಲವು ಜಿಲ್ಲೆಗಳಲ್ಲಿ ಸಂಚರಿಸಿ ಮಾನವ ಹಕ್ಕುಗಳ ಬಗ್ಗೆ ಪರೀಶೀಲನೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷನಾಗಿ  ನಾನು ಅಧಿಕಾರ ವಹಿಸಿಕೊಂಡಾಗ ಮಾನವ ಹಕ್ಕುಗಳ ಉಲ್ಲಂಘನೆಯ  8000  ಪ್ರಕರಣ ಬಾಕಿ ಇದ್ದವು . ಅವುಗಳಲ್ಲಿ ಬಹುತೇಕ ಇತ್ಯರ್ಥವಾಗಿವೆ ಎಂದರು.ಈಗ 3000 ಪ್ರಕರಣ  ಬಾಕಿ ಇವೆ . ಪ್ರತಿ ತಿಂಗಳು 500 ಪ್ರಕರಣ ದಾಖಲಾಗುತ್ತಿವೆ ಎಂದರು.

ಮಾನವ ಹಕ್ಕುಗಳು ಉಲ್ಲಂಘನೆಯಾದ ಪ್ರಕರಣದಲ್ಲಿ ,ಅಯಾ ಇಲಾಖೆಯ ಮೂಲಕ ಇತ್ಯರ್ಥಕ್ಕೆ ಪ್ರಯತ್ನ ಮಾಡಲಾಗುತ್ತದೆ.ಪ್ರಕರಣದ ಸತ್ಯಾಸತ್ಯತೆಯನ್ನು ಮೊದಲು  ನೋಡುವೆವು. ಮಾನವ ಹಕ್ಕುಗಳ ಉಲ್ಲಂಘನೆ ಆಗಿದ್ದರೆ ಕ್ರಮಕ್ಕೆ ಸೂಚನೆ ಮಾಡುತ್ತೇವೆ.ಕೆಲ ಪ್ರಕರಣಗಳಲ್ಲಿ ಪರಿಹಾರಕ್ಕೆ ಸಹ ಸರ್ಕಾರಕ್ಕೆ ಸೂಚನೆ ನೀಡುತ್ತೇವೆ ಎಂದರು. ತಪ್ಪಿತಸ್ಥ ಎಂದು ಸಾಬೀತಾದರೆ, ಪರಿಹಾರದ  ಹಣ ಸಂಬಂಧಿತ ಅಧಿಕಾರಿಯಿಂದ ವಸೂಲಿ ಮಾಡಿ ತುಂಬಿಸಿಕೊಳ್ಳಲು ಸರ್ಕಾರಕ್ಕೆ ಮಾರ್ಗದರ್ಶನ ಮಾಡುತ್ತೇವೆ.  

ಕ್ರಮ ಕೈಗೊಳ್ಳುವ ವಿಷಯ ಸರ್ಕಾರಕ್ಕೆ ಬಿಟ್ಟದ್ದು. ಈಗಾಗಲೇ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ ಅಧಿಕಾರಿಗಳ ವಿರುದ್ಧ 17 ಪ್ರಕರಣಗಳಲ್ಲಿ ಕ್ರಮಕ್ಕೆ ಬರೆದಿದ್ದೇವೆ . ಸರ್ಕಾರ ಕ್ರಮ ಸಹ  ತೆಗೆದುಕೊಂಡಿದೆ ಎಂದರು. ಮಾಧ್ಯಮ ಪಾತ್ರ ಮುಖ್ಯ : ಮಾನವಹಕ್ಕುಗಳ ಉಲ್ಲಂಘನೆ ವಿಷಯ ಬೆಳಕಿಗೆ ತರುವ ಕೆಲಸ ಮಾಧ್ಯಮಗಳಿಂದ ಆಗಬೇಕು. ಈಗ ನಾವು ಕೈಗೊಳ್ಳುವ ಪ್ರಕರಣಗಳಲ್ಲಿ ಸ್ವಯಂ ಪ್ರೇರಿತ ಪ್ರಕರಣ ಹೆಚ್ಚು. ಉಳಿದಂತೆ ಪೊಲೀಸ್ ಇಲಾಖೆಯಲ್ಲಿ ಮಾನವಹಕ್ಕುಗಳ ಉಲ್ಲಂಘನೆ ಹೆಚ್ಚು. ಅನಗತ್ಯ ಪ್ರಕರಣ ದಾಖಲಿಸಿ , ಮಾನವ ಹಕ್ಕುಗಳ ಉಲ್ಲಂಘನೆ ಆದರೆ ಅದರ ಪರಿಣಾಮವನ್ನು ಸಂಬಂಧಿತರು ಎದುರಿಸಬೇಕಾಗುತ್ತದೆ ಎಂದರು.

ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಅನ್ಯವ್ಯಕ್ತಿ ಸಹ ದೂರು ನೀಡಬಹುದು. ಸ್ವಯಂ ಪ್ರೇರಿತ ದೂರಿಗೆ ಅವಕಾಶ ಇದೆ  ಎಂದು ಅಧ್ಯಕ್ಷ ಶಾಮರ ಭಟ್ ಹೇಳಿದರು. ಆಯೋಗಕ್ಕೆ ಬಂದು ದೂರು ನೀಡಲು ಕೆಲವರಿಗೆ ಸಾಧ್ಯವಾಗಲ್ಲ. ಆಗ ಸಾರ್ವತ್ರಿಕರು ದೂರು ನೀಡಬಹುದು. ದೂರು ನೀಡಿದವರ ಹೆಸರು ಗೌಪ್ಯವಾಗಿ ಇಡಲಾಗುವುದು ಎಂದರು.ಮಾನವ ಹಕ್ಕುಗಳ ಆಯೋಗದಲ್ಲಿ ಶೇ.60 ದೂರು ಸ್ವಯಂ  ಪ್ರೇರಿತ ದಾಖಲಾಗುತ್ತವೆ. ಆಗ  ಸಂಬಂಧಿತ ಅಧಿಕಾರಿಗೆ ನೋಟೀಸ್ ಕೊಟ್ಟು ವಿಚಾರಣೆ ಮಾಡುತ್ತೇವೆ ಎಂದು ಅಧ್ಯಕ್ಷರು ಹೇಳಿದರು. 

ಉತ್ತರ ಕನ್ನಡ ಜಿಲ್ಲೆಯಲ್ಲಿ 30 ಪ್ರಕರಣಗಳು ಬಾಕಿ ಇದ್ದವು. ಅದಕ್ಕೆ ಅಧಿಕಾರಿಗಳು ಉತ್ತರ ಕೊಟ್ಟಿದ್ದಾರೆ . ಪರೀಶೀಲನೆ ನಡೆದಿದೆ. ಎಲ್ಲಾ ಪ್ರಕರಣ ಸಮಾಧಾನಕರ ಇತ್ಯರ್ಥವಾಗಿವೆ.  ಮೂರು ಪ್ರಕರಣ ಇತ್ಯರ್ಥಕ್ಕೆ  ಬಾಕಿ .ಒಂದು ಪ್ರಕರಣದಲ್ಲಿ ಪರಿಹಾರ  ಅನುದಾನ ಸರ್ಕಾರದಿಂದ ಬಾಕಿ ಇದೆ. ಅದಕ್ಕೆ ಪತ್ರ ಬರೆಯಲಾಗಿದೆ ಎಂದು ಶಾಮ್ ಭಟ್ ವಿವರಿಸಿದರು. ಮಾನವ ಹಕ್ಕುಗಳ ಆಯೋಗದ  ಕಚೇರಿ ಬೆಂಗಳೂರಲ್ಲಿದೆ.

ಅದಕ್ಕಾಗಿ ದೂರುದಾರರು ಓಡಾದಂತೆ ,ಜಿಲ್ಲೆಗಳಿಗೆ ಆಯೋಗವೇ ತೆರಳಿ ದೂರು ಪರೀಶೀಲನೆ ಮಾಡುತ್ತಿದೆ.ಅಗತ್ಯ ಬಿದ್ದಾಗ ಅಧಿಕಾರಿಗಳನ್ನು ಕರೆಸಿಕೊಂಡು ವಿಚಾರಣೆ ಮಾಡುತ್ತೇವೆ ಎಂದು ಅಧ್ಯಕ್ಷರು ಹೇಳಿದರು. ಹೆಸರು ಅನುಕರುಣೆ ವಿರುದ್ಧ ಪ್ರಕರಣ ದಾಖಲಿಸಲಾಗುವುದು : ಕೆಲವರು ಮಾನವ ಹಕ್ಕುಗಳ ಆಯೋಗದ  ಹೆಸರು ಹೋಲುವಂತೆ ತಮ್ಮ  ಸಂಸ್ಥೆಗಳಿಗೆ ಹೆಸರು ಇಟ್ಟುಕೊಂಡು ಕಾರ್ಯಾಚರಣೆ ಮಾಡುತ್ತಿದ್ದಾರೆ. ಕೆಲ ಕಚೇರಿಗೆ ತೆರಳಿ ಬ್ಲಾಕ್ ಮೇಲ್ ಮಾಡುವ ಮಾಹಿತಿ ಇದೆ.   

ಅಂಥ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ . ಮಾನವ ಹಕ್ಕುಗಳ ಹೆಸರಲ್ಲಿ ಸಂಸ್ಥೆ ರಿಜಿಸ್ಟರ್ ಮಾಡಿ, ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಿದ ಉದಾಹರಣೆ ಇವೆ. ವಾಹನಗಳಿಗೆ ಬೋರ್ಡ್‌ ಹಾಕಿಕೊಂಡು ಕೆಲವರು ಓಡಾಡುತ್ತಿರುವ ಮಾಹಿತಿ ಇದೆ. ಈ ಬಗ್ಗೆ ದೂರು ಬಂದರೆ ಪರೀಶೀಲನೆ ಮಾಡಲಾಗುವುದು.  ಅಂಥ ವ್ಯಕ್ತಿಗಳ  ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾನವಹಕ್ಕುಗಳ ಆಯೋಗದ ಅಧ್ಯಕ್ಷರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಆಯೋಗದ ನ್ಯಾಯಾಂಗ ಸದಸ್ಯ, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಎಸ್ಪಿ ದೀಪನ್, ಸಿಇಒ ದೀಲೀಶ್ ಶಶಿ ಇದ್ದರು. 


ಸುದ್ದಿ ಓದಿ