ಒಂದೇ ಸ್ಥಳದಲ್ಲಿ, ಒಂದೇ ದಿನಾ 3 ಅಪಘಾತಗಳು : ರಸ್ತೆಗೆ ಸ್ಪೀಡ್ ಬ್ರೆಕರ್ ಹಾಕದ ಅಧಿಕಾರಿಗಳ ವಿರುದ್ದ ಆಕ್ರೋಶ

ಒಂದೇ ಸ್ಥಳದಲ್ಲಿ, ಒಂದೇ ದಿನಾ 3 ಅಪಘಾತಗಳು : ರಸ್ತೆಗೆ ಸ್ಪೀಡ್ ಬ್ರೆಕರ್ ಹಾಕದ ಅಧಿಕಾರಿಗಳ ವಿರುದ್ದ ಆಕ್ರೋಶ
3 accidents in one place, one day: Outrage against officials for not installing speed breakers on th

ಸಂಕೇಶ್ವರ : ಪಟ್ಟಣದಲ್ಲಿ ಗುರುವಾರ ಒಂದೇ ದಿನ, ಒಂದೇ ಸ್ಥಳದಲ್ಲಿ ಸ್ವಲ್ಪ ಅಂತರಗಳಲ್ಲಿ 3 ಅಪಘಾತಗಳು ಸಂಭಿಸಿದ್ದು, ಅಪಾಯಕಾರಿ ರಸ್ತೆಗೆ ಸ್ಪೀಡ್ ಬ್ರೆಕರ್ ( ರಸ್ತೆ ಹಂಸ) ಹಾಕುವಂತೆ ಜನರು ಒತ್ತಾಯಿಸಿದರು ಅಧಿಕಾರಿಗಳು ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಜನರ ಜೀವದೊಂದಿಗೆ ಚೆಲ್ಲಾಟ ಆಡುವ ಬದಲು ರಸ್ತೆಗೆ ಸ್ಪೀಡ್ ಬ್ರೆಕರ್ ಹಾಕುವಂತೆ ನಾಗರಿಕರು ಒತ್ತಾಯಿಸಿದ್ದಾರೆ. 

    ಸಂಕೇಶ್ವರ ಪಟ್ಟಣದ ಹಳೆ ಪಿಬಿ ರಸ್ತೆಯ ಚನ್ನಮ್ಮ ವೃತ್ತ (ಪೊಸ್ಟ್ ಸರ್ಕಲ್) ದಲ್ಲಿ ರಸ್ತೆ ಇಳಿಜಾರು ಇದ್ದು, ಇಲ್ಲಿ ಯಾವದೇ ರೀತಿಯ ಸ್ಪೀಡ್ ಬ್ರೆಕರ್ ಗಳು ಇರುವದಿಲ್ಲ. ಇದರಿಂದ ವಾಹನ ಸವಾರರು ಇಳಿಜಾರು ರಸ್ತೆಗೆ ಮೀತಿ ಇಲ್ಲದ ವೇಗದಲ್ಲಿ ಹೋಗುತ್ತಿದ್ದಾರೆ. ಇದರಿಂದ ಈ ರಸ್ತೆಯಲ್ಲಿ ಸಾಗುವ ಪಾದಚಾರಿ ಜನರ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುವ ಪರಿಸ್ಥಿತಿ ನಿರ್ಮಾನವಾಗಿದೆ. 

     ದಿನನಿತ್ಯ ಸಂಕೇಶ್ವರದ ಚನ್ನಮ್ಮ ಸರ್ಕಲ್ ನಲ್ಲಿ ಅಪಘಾತ ಗಳು ಸಂಭವಿಸುತ್ತಿದ್ದು, ಗುರುವಾರ ಒಂದೇ ದಿನ ಒಂದೇ ಪ್ರದೇಶ, ಒಂದೇ ರಸ್ತೆಯಲ್ಲಿ 3 ಅಪಘಾತ ಗಳು ಸಂಭವಿಸಿವೆ. ಈ ಇಳಿಜಾರು ರಸ್ತೆಗೆ ಸ್ಪೀಡ್ ಬ್ರೆಕರ್ ಹಾಕದೆ ಇದ್ದಲ್ಲಿ ಇನ್ನು ಕೆಲವು ನಾಗರಿಕರ ಜೀವಕ್ಕೆ ಈ ರಸ್ತೆ ಕಂಟಕವಾಗಲಿದೆ. 

     ಇಷ್ಠೇಲ್ಲಾ ನಡೆಯುತ್ತಿದ್ದರು ಪುರಸಭೆ ಅಥವಾ ಲೋಕೋಪಯೋಗಿ ಅಧಿಕಾರಿಗಳು ಮಾತ್ರ ಇದಕ್ಕು ತಮಗು ಯಾವದೇ ಸಂಭಂಧ ಇಲ್ಲದಂತೆ ವರ್ತಿಸುತ್ತಿರುವದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಜನರ ಜೀವದ ಜೊತೆಗೆ ಚೆಲ್ಲಾಟ ಆಡದೆ ಸ್ಪೀಡ್ ಬ್ರೆಕರ್ ಗಳನ್ನು ಹಾಕಬೇಕು ಎಂದು ಈ ಪ್ರದೇಶನ ಜನರು ಒತ್ತಾಯಿಸುತ್ತಿದ್ದಾರೆ.

ಸುದ್ದಿ ಓದಿ