ರಾಣೆಬೆನ್ನೂರ

ಪ್ರಯಾಣಿಕರಿಗೆ ಸಮರ್ಪಕ ಸೇವೆಗೆ 270 ಬಸ್ ಲಭ್ಯ: ಡಾ.ಕೇಲಗಾರ

ಪ್ರಯಾಣಿಕರಿಗೆ ಸಮರ್ಪಕ ಸೇವೆಗೆ 270 ಬಸ್ ಲಭ್ಯ: ಡಾ.ಕೇಲಗಾರ

ರಾಣೀಬೆನ್ನೂರ 29: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಅನುಕೂಲತೆಗಾಗಿ ಕೋವಿಡ್‌-19 ಪ್ರಯುಕ್ತ ಇಂದು ಮಂಗಳವಾರದಿಂದ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲಾ ಪ್ರದೇಶಗಳಿಗೆ ಸಂಚರಿಸಲು 270 ಸಾರಿಗೆ ಬಸ್‌ಗಳನ್ನು ಬಿಡಲು ನಿರ್ಧರಿಸಿ ಅದೇಶಿಸಿದ್ದಾರೆ ಎಂದು ವಾಕರಾ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಡಾ.ಬಿ.ಎಸ್‌.ಕೇಲಗಾರ ಹೇಳಿದ್ದಾರೆ.  

ಅವರು ಮಂಗಳವಾರ ನಮ್ಮ ಪ್ರತಿನಿಧಿಯೊಂದಿಗೆ ಈ ಕುರಿತು ಮಾತನಾಡಿ ಪ್ರಸ್ತುತ ಕೋವಿಡ್‌-19 ರೂಪಾಂತರಿ ವೈರಸ್ ತೀವ್ರವಾಗಿ ಹರಡುತ್ತಿರುವುದರಿಂದ ರಾಜ್ಯ ಸರ್ಕಾರವು ಏ 27ರಿಂದ ಮೇ 10ರವರೆಗೆ ಲಾಕ್‌ಡೌನ್ ಘೋಷಿಸಿದೆ. ರಾಜಧಾನಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಪ್ರಯಾಣಿಕರು ಮತ್ತು ವಲಸೆ ಕಾರ್ಮಿಕರು ರಾಜ್ಯ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ  ಪ್ರಯಾಣಿಸುವ ಸಾಧ್ಯತೆ ಇದೆ ಎಂದು ಮನಗಂಡ ಸಾರಿಗೆ ಸಂಸ್ಥೆಯು 27 ರಂದು ಅವರ ಸ್ಥಳಗಳಿಗೆ ತಲುಪಿಸುವ ಉದ್ದೇಶದಿಂದ ವಿಭಾಗಾವಾರು ಹೆಚ್ಚುವರಿ ಬಸ್ ಗಳನ್ನು ಬಿಡುತ್ತದೆ. ಎಂದು ಹೇಳಿದ್ದಾರೆ. 

ಪ್ರಸ್ತುತ ಹುಬ್ಬಳ್ಳಿ ವಿಭಾಗದಿಂದ-35, ಧಾರವಾಡ-30, ಬೆಳಗಾವಿ-25, ಚಿಕ್ಕೋಡಿ-25, ಬಾಗಲಕೋಟೆ-30, ಹಾವೇರಿ-50, ಗದಗ-40, ಶಿರಸಿ-35 ಹೀಗೆ ಒಟ್ಟು 270 ಸಾರಿಗೆ ಬಸ್ಸುಗಳನ್ನು ಬಿಡಲು ಮುಂದಾಗಿದ್ದು ಪ್ರಯಾಣಿಕರು ಮತ್ತು ವಲಸೆ ಕಾರ್ಮಿಕರು ಇದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು ಎಂದಿದ್ದಾರೆ.  


ಸುದ್ದಿ ಓದಿ