224ನೇ ಮಹಾಮನೆ ಕಾರ್ಯಕ್ರಮ ವಚನಗಳು ಸಮಾಜದ ಏಳ್ಗೆಗೆ ಪೂರಕ: ಆನಂದಸ್ವಾಮಿ

224ನೇ  ಮಹಾಮನೆ ಕಾರ್ಯಕ್ರಮ  ವಚನಗಳು ಸಮಾಜದ ಏಳ್ಗೆಗೆ ಪೂರಕ: ಆನಂದಸ್ವಾಮಿ

ಲೋಕದರ್ಶನ ವರದಿ

ಬಳ್ಳಾರಿ 22: ವಚನಗಳು ಕೇವಲ ಸಾಹಿತ್ಯಿಕ ಅಂಶಗಳನ್ನು ಹೊರಗೆಡಹುವ ಕೃತಿಗಳಾಗಿ ಬರದೇ ಸಮಾಜದ ಓರೆಕೋರೆಗಳನ್ನು ಧಾಮರ್ಿಕ ನೆಲೆಯಲ್ಲಿ ನಡೆಯುವ ಮೌಢ್ಯತೆಯನ್ನು ನಿವಾರಿಸುವ ಎರಡು ಕೆಲಸಗಳನ್ನು ಏಕಕಾಲದಲ್ಲಿ ಮಾಡುವ ಮೂಲಕ ಸಮಾಜದ ಏಳ್ಗೆಗೆ ಪೂರಕವಾಗಿವೆ ಎಂದು ರಾಯಲ್ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಆನಂದಸ್ವಾಮಿ ಬೆಳಗಲ್ಹಿರೇಮಠ್ ನುಡಿದರು. 

ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಪಾರ್ವತಿನಗರದ ಬ್ಯಾನಿಯನ್ ಗ್ರೂವ್ ಆಂಗ್ಲ ಮಾಧ್ಯಮ ಶಾಲೆ (ನಾಗಪ್ಪ ಬಾಲವಿಹಾರ ಶಾಲೆ)ಯಲ್ಲಿ ಲಿ|| ಡಾ.ವೈ.ನಾಗೇಶಶಾಸ್ತ್ರಿ ದತ್ತಿ ಮತ್ತು ಮಿಂಚೇರಿ ಗೌಡ್ರ ಅಂಬಮ್ಮ ಶಿವಾರೆಡ್ಡಿ ದತ್ತಿಯನ್ನು 224ನೇ ಮಹಾಮನೆ ಕಾರ್ಯಕ್ರಮದಲ್ಲಿ ``ಸಮಾಜೋ-ಧಾಮರ್ಿಕ ಕಾರ್ಯದಲ್ಲಿ ವಚನಗಳು'' ವಿಷಯವಾಗಿ ಮಾತನಾಡುತ್ತಾ, ಸಮಾಜದ ಶ್ರೇಯಸ್ಸೇ ಮೂಲ ಉದ್ದೇಶವಾಗಿ ಇದಕ್ಕೆ ಪೂರಕವಾದ ನೈತಿಕ ಆಚರಣೆಯನ್ನು ಜನತೆಯಲ್ಲಿ ಮೈಗೂಡಿಸಿಕೊಳ್ಳಲು ನೆರವಾಗುವಂತೆ ಧರ್ಮವನ್ನು ಶರಣರು ಬಳಸಿದರು. ಧರ್ಮವು ಕೇವಲ ಕೆಲವೇ ಜನಗಳ ಹೊರ ಆಚರಣೆಯ ಸ್ವತ್ತಲ್ಲ. ಅದು ಸಮಾಜದ ಸರ್ವ ಜನಾಂಗದಲ್ಲಿ ಒಡನಾಡುವ ಬಗೆ ಎಂದು ಬಣ್ಣಿಸಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿರಡಿ ಸಾಯಿ ಸೇವಾ ಸತ್ಸಂಗ ಟ್ರಸ್ಟ್ನ ಅಧ್ಯಕ್ಷ ಆರ್.ಗೋಪಾಲಕೃಷ್ಣ ಮಾತನಾಡುತ್ತಾ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಮುಖಿಯಾಗಿ ಮನುಷ್ಯ ಬಾಳಿದರೆ, ತಾನು ಮತ್ತು ತನ್ನ ಕುಟುಂಬದೊಂದಿಗೆ ಇಡೀ ಪರಿಸರವನ್ನು ಸುಖ ಹಾಗೂ ಶಾಂತಿಯಿಂದ ಇರುವಂತೆ ಮಾಡಬಲ್ಲ ಎಂಬುದಾಗಿ ನುಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ಎನ್.ಉಷಾರಾಣಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ವಿದ್ಯಾಸಂಸ್ಥೆಯ ಕಾರ್ಯದಶರ್ಿಗಳಾದ ಆರ್.ಪಂಪನಗೌಡರು ವಿದ್ಯಾಥರ್ಿಗಳ ಕಲಿಕೆಯಲ್ಲಿ ಕೇವಲ ವಿಷಯ ಗ್ರಹಣೆ ಮಾತ್ರ ಮೂಲವಾಗಿರದೆ ನೈತಿಕ ಮತ್ತು ಸಾಮಾಜಿಕ ಕಾಳಜಿಯೊಂದಿಗೆ ಕಲಿಕೆ ನಡೆದಾಗ ಸಮಾಜಕ್ಕೆ ಶ್ರೇಯಸ್ಕರ ಎಂದರು. 

ವೇದಿಕೆಯಲ್ಲಿ ದತ್ತಿ ದಾಸೋಹಿ     ಡಾ.ಹೆಚ್.ಮಲ್ಲಿಕಾಜರ್ುನಗೌಡರು ಉಪಸ್ಥಿತರಿದ್ದರು. ಶಾಲಾ ವಿದ್ಯಾಥರ್ಿಗಳಿಗೆ ವಚನ ವಾಚನ ಮಾಡಿಸಿ ಆರು ವಿದ್ಯಾಥರ್ಿಗಳಿಗೆ ಪುಸ್ತಕ ಬಹುಮಾನಗಳನ್ನು ನೀಡಲಾಯಿತು. ಪ್ರಾರ್ಥನೆಯನ್ನು ಪ್ರೀತಿ ಹಾಗೂ ಸಂಗಡಿಗರು ನೆರವೇರಿಸಿದರು. ಕನ್ನಡ ಶಿಕ್ಷಕರಾದ ಚಂದ್ರಶೇಖರವರು ಸ್ವಾಗತಕೋರಿದರು. ಮತ್ತೋರ್ವ ಶಿಕ್ಷಕಿ ಕ್ಷಮಾ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ದತ್ತಿ ದಾನಿಗಳನ್ನು ಪರಿಚಯಿಸಿ ಶರಣು ಸಮರ್ಪಣೆಯನ್ನು ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ನೆರವೇರಿಸಿದರು. 


ಸುದ್ದಿ ಓದಿ