ಕಟಕೋಳ ಸಿದ್ರಾಯಜ್ಜನವರ ಸಹಕಾರಿ ಬ್ಯಾಂಕ್ಗೆ 21,81,722 ನಿವ್ವಳ ಲಾಭ
ಯರಗಟ್ಟಿ 28: ಪಟ್ಟಣದ ಕಟಕೋಳ ಸಿದ್ರಾಯಜ್ಜನವರ ಸೌಹಾರ್ದ ಸಹಕಾರಿ ಯರಗಟ್ಟಿ ಬ್ಯಾಂಕಿನ ಪ್ರಸಕ್ತ ಆರ್ಥಿಕ ವರ್ಷದಲ್ಲಿ 21,81,722 ರೂ.ಗಳಷ್ಟು ನಿವ್ವಳ ಲಾಭವಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷರಾದ ಕಟಕೋಳದ ಸಿದ್ರಾಯಜ್ಜನವರು ಹೇಳಿದರು.
ಇತ್ತೀಚಿಗೆ ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ವರ್ಷದ ಬ್ಯಾಂಕಿನ ಆರ್ಥಿಕ ವಿವರವನ್ನು ಸಭೆಗೆ ತಿಳಿಸಿದರು. ಮಾರ್ಚ್ 2024ಕ್ಕೆ ಇರುವ ಆರ್ಥಿಕ ಅಂಶಗಳನ್ನು ಅವರು ಸಭೆಗೆ ತಿಳಿದ ಪ್ರಕಾರ ಒಟ್ಟು ಶಾಖೆಗಳು 3 ಇದ್ದು 20394 ಸದಸ್ಯರನ್ನು ಹೊಂದಲಾಗಿದೆ. ಶೇರು ಬಂಡವಾಳ 13, 86,300 2. 72,02,624 ರಷ್ಟು ನಿಧಿಗಳನ್ನು ಹೊಂದಿರುವ ಸಹಕಾರಿ ಬ್ಯಾಂಕಿನಲ್ಲಿ 13,11,79,069 ರೂ ಠೇವಣಿಗಳನ್ನು ಇಡಲಾಗಿದೆ. ಸಾಲ ಮತ್ತು ಮುಂಗಡಗಳು 10,09,29,013 ರೂ ನೀಡಲಾಗಿದೆ. ದುಡಿಯುವ ಬಂಡವಾಳ 13,97,67,993 ರೂ ಇರುತ್ತದೆ. ಬ್ಯಾಂಕ್ ಮತ್ತು ನಗದು 2,75,31,289, 1,07,44,598 ಪ್ರಸಕ್ತ ವರ್ಷದಲ್ಲಿ 21,81,722. ನಿವ್ವಳ ಲಾಭವಾಗಿದೆ. ಒಟ್ಟು ವಹಿವಾಟು 59,02,54,523 ರೂ ಆಗಿದೆ. ಡಿವಿಡೆಂಡ್ 2022-23ಕ್ಕೆ ಶೇ 20ಅ ರಷ್ಟು ಇರುತ್ತದೆ ಎಂದು ಸಭೆಯಲ್ಲಿ ಈ ಅಂಕಿ ಅಂಶಗಳನ್ನು ಗ್ರಾಹಕರಿಗೆ ವಿವರಿಸಿದರು.
ಅಧ್ಯಕ್ಷ ಪವಿತ್ರಾ ಪೂಜೇರ, ಉಪಾಧ್ಯಕ್ಷರು ತಿಪ್ಪಣ್ಣ ಸಿಂಗಾರಗೊಪ್ಪ, ವ್ಯವಸ್ಥಾಪಕರು ಚಿದಂಬರ ಮಾರುತಿ ಕದಂ, ರವಿ ಲಕ್ಷಟ್ಟಿ, ಸಂಭಾಜಿ ಕದಂ, ನಾಗಪ್ಪ ಕಟಗಿ, ಶ್ರೀಶೈಲ ಸಿಂಗಾರಗೊಪ್ಪ, ಉಮೇಶ ಯರಗಟ್ಟಿ ಹಾಗೂ ನಿರ್ದೇಶಕರು ಠೇವಣಿದಾರರು ಸೇರಿದಂತೆ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.