ಯರಗಟ್ಟಿ

2,000ಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ, ಭವಿಷ್ಯಕ್ಕೆ ಮೀಸಲಿಡಿ: ಮಠದ

2,000ಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ, ಭವಿಷ್ಯಕ್ಕೆ ಮೀಸಲಿಡಿ: ಮಠದ

ಲೋಕದರ್ಶನ ವರದಿ

ಯರಗಟ್ಟಿ 31: ಪಟ್ಟಣದ ಮಹಾಂತ ದುರದುಂಡೇಶ್ವರ ಶ್ರೀಮಠದಲ್ಲಿ ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ  ಗೃಹಲಕ್ಷ್ಮಿ ಯೋಜನೆಯ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ತಹಶೀಲ್ದಾರ್ ಮಹಾಂತೇಶ ಮಠದ ಮಾತನಾಡಿ ಸರ್ಕಾರವು ಚುನಾವಣೆ ಪೂರ್ವದಲ್ಲಿ  ನುಡಿದಂತೆ ನಡೆದು ಇಂದು ಗೃಹಲಕ್ಷ್ಮಿ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡುತ್ತಿದೆ,  ರಾಜ್ಯದ ಮಹಿಳೆಯರನ್ನು ಸಬಲರನ್ನಾಗಿಸಲು ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದೆ, ಕುಟುಂಬದ ಯಜಮಾನಿಯರು ಯೋಜನೆಯಿಂದ ದೊರೆಯುವ ಮಾಸಿಕ 2,000ಗಳನ್ನು ದುಂದು ವೆಚ್ಚ ಮಾಡದೆ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಭವಿಷ್ಯಕ್ಕೆ ಮೀಸಲಿಡಬೇಕು ಎಂದರು.

ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ನಿಖಿಲ ಪಾಟೀಲ ವೈಯಕ್ತಿಕ ಆಸೆ, ಆಕಾಂಕ್ಷೆ, ಅವಶ್ಯಕತೆಗಳನ್ನು ತ್ಯಾಗಮಾಡಿ ಕುಟುಂಬಕ್ಕಾಗಿ ತಮ್ಮ ಬದುಕನ್ನೇ ಸಮಪರ್ಿಸಿಕೊಂಡಿರುವ ನಾಡಿನ ಕೋಟ್ಯಂತರ ತಾಯಂದಿರು ಇಂದು ನಮ್ಮ ಗೃಹಲಕ್ಷ್ಮಿ ಯೋಜನೆಯಿಂದ ಸ್ವತಂತ್ರ, ಸ್ವಾವಲಂಬಿ ಬದುಕಿಗೆ ಪಾದಾರ್ಪಣೆ ಮಾಡಲಿದ್ದಾರೆ.

ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ರಾಜ್ಯದ ಪ್ರತಿಯೊಬ್ಬ ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ 2000 ರೂಪಾಯಿಗಳನ್ನು ನೇರವಾಗಿ ವರ್ಗಾವಣೆ ಮಾಡಿ ನುಡಿದಂತೆ ನಡೆಯಲಿದೆ.

ಈ ಐತಿಹಾಸಿಕ ಯೋಜನೆಯಿಂದ ನಾಡಿನ ತಾಯಂದಿರ ಮುಖದಲ್ಲಿ ಮೂಡುವ ನೆಮ್ಮದಿಯ ನಗೆ ಕಾಣಲು ಉತ್ಸುಕರಾಗಿದ್ದೇವೆ.

ಮಹಿಳೆಯರ ಸಬಲೀಕರಣದಿಂದ ಬಲಿಷ್ಠ ಸಮಾಜ ನಿರ್ಮಾಣ. ಮಹಿಳಾ ಸಮಾನತೆಯಿಂದ ಸಮ ಸಮಾಜ ಸ್ಥಾಪನೆ ಎಂದು ಹೇಳಿದರು.

ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಬಿ. ಡಿ. ಕುಮರೇಶಿ, ಅಂಗನವಾಡಿ ಹಿರಿಯ ಮೇಲ್ವಿಚಾರಕಿ ಶ್ರೀಮತಿ ವಿ. ಜಿ. ಹಿರೇಮಠ, ಕಿರಿಯ ಮೇಲ್ವಿಚಾರಕಿ ಮಾಯವ್ವ ಮುಗಳಿಹಾಳ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಯ್. ಆರ್. ಗಂಜಿ,  ಕಾಂಗ್ರೇಸ ಮುಖಂಡರಗಳಾದ ಮಂಜುನಾಥ ತಡಸಲೂರ, ಹನುಮಂತ ಹಾರುಗೋಪ್ಪ, ಶಿವಾನಂದ ಕರಿಗೋಣ್ಣವರ, ಬಸವರಾಜ ಚನ್ನಮೆತ್ರಿ, ರಾಮನಗೌಡ ಪಾಟೀಲ, ಸಲಿಂಬೇಗ ಜಮಾದಾರ, ರಫೀಕ ಡಿ.ಕೆ, ಫೀರೋಜ ಖಾದ್ರಿ, ಹನುಮಂತ ಕಡಕೋಳ, ಫಾರುಕ್ ಅತ್ತಾರ, ಅಬಿದಬೇಗ ಜಮಾದಾರ, ಶ್ರೀಮತಿ ಶಾನೂರಬಿ ದಿಲಾವರನಾಯ್ಕ, ಸೇರಿದಂತೆ ಅನೇರು ಇದ್ದರು 

ಸುದ್ದಿ ಓದಿ