ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಸರ್ಕಾರಿ ನೇಮಕಾತಿಗಳಲ್ಲಿ ಶೇ.2ರಷ್ಟು ಮೀಸಲಾತಿ: ಪಾಟೀಲ
ಬ್ಯಾಡಗಿ: ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರಿ ನೇಮಕಾತಿಗಳಲ್ಲಿ ಶೇ.2 ರಷ್ಟು ಮೀಸಲಾತಿ ಪ್ರಕಟಿಸಿದ್ದು ಅತ್ಯಂತ ಸ್ತುತ್ಯಾರ್ಹ, ರಾಜ್ಯದ ಕ್ರೀಡಾಪಟುಗಳಿಗೆ ನಿದರ್ಿಷ್ಟ ಗುರಿಯೊಂದಿಗೆ ಸಾಧನೆಯತ್ತ ಹೆಜ್ಜೆ ಹಾಕಲು ಪ್ರೇರಣೆ ನೀಡಲಿದೆ ಎಂದು ಮಾಜಿ ಶಾಸಕ ಮತ್ತು ಬಿಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುರೇಶಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಆಂಧ್ರಪ್ರದೇಶದ ಕಾಕಿನಾಡದಲ್ಲಿ ನ.9ರಂದು ಆರಂಭವಾಗಲಿರುವ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಾರಿಗೆ ಪಾಲ್ಗೊಳ್ಳಲ್ಲಿರುವ ಹಾವೇರಿ ವಿಶ್ವವಿದ್ಯಾಲಯದ ತಂಡದ ತರಬೇತಿ ಶಿಬಿರದ ಮುಕ್ತಾಯ ಹಾಗೂ ಸದಸ್ಯರಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.
ಉದ್ಯೋಗ ಭರವಸೆಯಿಲ್ಲದೇ ಬಹುತೇಕ ಕ್ರೀಡಾಪಟುಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಅಪಯಶಸ್ಸು ಕಂಡಿದ್ದಾರೆ ಹೀಗಾಗಿ ಕಬಡ್ಡಿಯಂತಹ ದೇಶೀಯ ಕ್ರೀಡೆಗಳು ನಮ್ಮಲ್ಲೇ ನೆಲೆಯಿಲ್ಲದಂತಾಗಿದ್ದವು, ಆದರೆ ಇತ್ತೀಚೆಗೆ ಪ್ರೋ-ಕಬಡ್ಡಿ ಆಯೋಜನೆ ಬಳಿಕ ಫೀನಿಕ್ಸ್ನಂತೆ ಎದ್ದು ನಿಂತಿರುವ ಕಬಡ್ಡಿಗೆ ಇದೀಗ ವಿದೇಶಗಳಲ್ಲಿಯೂ ಮನ್ನಣೆ ದೊರೆಯುತ್ತಿದೆ ಎಂದರು.
ಪ್ರಾಚಾರ್ಯ ಎಸ್.ಜಿ.ವೈದ್ಯ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯದ ತಂಡದ 5 ದಿನಗಳ ತರಬೇತಿ ಶಿಬಿರವು ನಮ್ಮ ಕಾಲೇಜಿನಲ್ಲಿ ನಡೆದಿದ್ದು ಇಂದು ಮುಕ್ತಾಯಗೊಂಡಿದೆ ನಮ್ಮ ತಂಡವು ಅತ್ಯಂತ ಕಠಿಣ ಅಭ್ಯಾಸ ಹಾಗೂ ತರಬೇತಿ ಪಡೆದುಕೊಂಡು ಸಕಲ ಸಿದ್ಧತೆಗಳೊಂದಿಗೆ ಕಾಕಿನಾಡದಲ್ಲಿ ನಡೆಯಲಿರುವ ಪುರುಷರ ಅಂತರ ವಿವಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ ಎಂದರು.
ಈ ವೇಳೆ ಬಿಇಎಸ್ ಕಾಲೇಜು ನಿರ್ದೇಶಕ ಡಾ.ಎಸ್.ಎನ್.ನಿಡಗುಂದಿ, ಉಪನ್ಯಾಸಕರಾದ ಎನ್.ಎಸ್.ಪ್ರಶಾಂತ್, ಪ್ರಭುಲಿಂಗ ದೊಡ್ಮನಿ, ಸುರೇಶಕುಮಾರ ಪಾಂಗಿ, ಪ್ರವೀಣ ಬಿದರಿ, ನಿಂಗಪ್ಪ ಕುಡುಪಲಿ, ಶಿವನಗೌಡ ಪಾಟೀಲ, ವಿಶ್ವನಾಥ ವಡೆಯನಪುರ, ಮಲ್ಲೇಶ ಮುಧೋಳಕರ, ಪ್ರಶಾಂತ ಜಂಗಳೇರ, ದೈಹಿಕ ನಿದರ್ೇಶಕ ಶಶಿಧರ ಮಾಗೋಡ, ಗ್ರಂಥಪಾಲಕ ಸಂತೋಷ ಉದ್ಯೋಗಣ್ಣನವರ, ಸಿಬ್ಬಂದಿ ಎಂ.ಆರ್.ಕೋಡಿಹಳ್ಳಿ, ಬಂಕಾಪುರ ಪದವಿ ಕಾಲೇಜಿನ ದೈಹಿಕ ನಿರ್ದೇಶಕ ಮಹದೇವು ಸೇರಿದಂತೆ ಇನ್ನಿತರರಿದ್ದರು.