18,235ರೂ ಮೌಲ್ಯದ ಅಕ್ರಮ ಅಬಕಾರಿ ಸ್ವತ್ತುಗಳು ಜಪ್ತಿ
ಕಾರವಾರ 20 :ಜಿಲ್ಲೆಯ ಹೊನ್ನಾವರ ತಾಲೂಕಿನ ಜಳವಳ್ಳಿ ಗ್ರಾಮದ ಕಾನಗೋಡಿನ ಚಂದ್ರಶೇಖರ್ ಗಣಪಯ್ಯ ಗೌಡನ ಮನೆ ಹಾಗೂ ತೋಟದ ಮೇಲೆ ಫೆ. 18ರಂದು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 18,235ರೂ ಮೌಲ್ಯದ ಅಕ್ರಮ ಅಬಕಾರಿ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಶೈಲಜಾಕೋಟೆ ಹಾಗೂ ಉತ್ತರಕನ್ನಡ ಜಿಲ್ಲೆ ಅಬಕಾರಿ ಉಪ ಆಯುಕ್ತ ವನಜಾಕ್ಷಿ ಎಂ. ರವರ ಮಾರ್ಗದರ್ಶನದಲ್ಲಿ ಕಾರವಾರದ ಅಬಕಾರಿ ಉಪ ಅಧೀಕ್ಷ ಸಂತೋಶ ಎಂ ಕುಡಾಲಕರರವರ ನೇತೃತ್ವದ ತಂಡವ ಗುರುವಾರ ಹೊನ್ನಾವರ ತಾಲೂಕಿನ ಜಳವಳ್ಳಿ ಗ್ರಾಮದ ಕಾನಗೋಡಿನ ಚಂದ್ರಶೇಖರ್ ಗಣಪಯ್ಯ ಗೌಡನ ಮನೆ ಹಾಗೂ ತೋಟದ ಮೇಲೆ ದಾಳಿ ನಡೆಸಿ ತೋಟದಲ್ಲಿ ಸಂಗ್ರಹಿಸಿದ್ದ 250ಲೀ ಬೆಲ್ಲದ ಕೊಳೆ, 20 ಲೀ ಕಳ್ಳಭಟ್ಟಿ ಎರೆಡು ಸ್ಯಾಚೆಟ್ಸ್ ಮಷಿನ್ ಹಾಗೂ 100ಮೀ ಲೀ ನ 3 ಸ್ಯಾಚೆಟ್ಸ್ ಸೇರಿದಂತೆ ಒಟ್ಟೂ 18,235ರೂ ಮೌಲ್ಯದ ಅಕ್ರಮ ವಸ್ತುಗಳನ್ನ ಜಪ್ತಿ ಮಾಡಲಾಗಿದ್ದು ಆರೋಪಿಯು ಪಲಾಯನ ಮಾಡಿದ್ದಾನೆ.
ದಾಳಿಯಲ್ಲಿ ಕಾರವಾರ ಜಿಲ್ಲಾತಂಡದ ಅಬಕಾರಿ ನಿರೀಕ್ಷಕ ಬಸವರಾಜ ಕರೆವಿನಕೊಪ್ಪ, ಹೊನ್ನಾವರ ಉಪ ವಿಭಾಗದ ನಿರೀಕ್ಷಕ ದಾಮೊದರ್ಏನ್ ನಾಯ್ಕ್, ಕುಮಟಾ ವಲೆಯದ ಅಬಕಾರಿ ನಿರೀಕ್ಷಕ ಭಟ್ಕಳ ವಲೆಯದ ಅಬಕಾರಿ ನಿರೀಕ್ಷಕ ಬಿ ಎಲ್ ಬೋರಕರ ಹಾಗೂ ಸಿಬ್ಬಂದಿಗಳು ಇದ್ದರು.