ಚಿಕ್ಕೋಡಿ

ಚುನಾವಣೆಯಲ್ಲಿ 16 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆ

ಚುನಾವಣೆಯಲ್ಲಿ 16 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆ

ಚಿಕ್ಕೋಡಿ 27: ಇಲ್ಲಿನ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರಖಾನೆಗೆ ಮುಂದಿನ ಐದು ವರ್ಷಗಳ ಅವಧಿಗೆ ನಡೆದ  ಆಡಳಿತ ಮಂಡಳಿಗೆ ನಡೆದ  ಚುನಾವಣೆಯಲ್ಲಿ 16 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಉಪನಿಬಂಧಕರು ಸಹಕಾರ ಸಂಘಗಳ ನಿವೃತ್ತ ಉಪನಿಬಂಧಕರಾದ ಜಿ.ಡಿ.ಗಚ್ಚಿ ತಿಳಿಸಿದರು.  

ನೂತನ ಆಡಳಿತ ಮಂಡಳಿ ನಿರ್ದೇಶಕರಾದ ಅಮೀತ ಕೋರೆ ಅಂಕಲಿ, ಮಹಾಂತೇಶ ಕವಟಗಿಮಠ ಚಿಕ್ಕೋಡಿ, ಅಣ್ಣಾಸಾಹೇಬ ಜೊಲ್ಲೆ ಯಕ್ಸಂಬಾ, ಮಲ್ಲಿಕಾರ್ಜುನ ಕೋರೆ ಅಂಕಲಿ, ಭರತೇಶ ಬನವಣೆ ನಸಲಾಪೂರ, ಅಜೀತ ದೇಸಾಯಿ ಯಡೂರ, ತಾತ್ಯಾಸಾಹೇಬ ಕಾಟೆ ಸೌಂದತ್ತಿ, ಪರಸಗೌಡ ಪಾಟೀಲ ಜುಗಳ, ಸಂದೀಪ ಪಾಟೀಲ ಭೋಜ, ಮಹಾವೀರ ಮಿರ್ಜೆ ಚಿಕ್ಕೋಡಿ, ಚೇತನ ಪಾಟೀಲ ಸದಲಗಾ, ಮಲ್ಲಪ್ಪಾ ಮೈಶಾಳೆ ದಿಗ್ಗೇವಾಡಿ, ಮಹಾವೀರ ಕಾತ್ರಾಳೆ ಶಿರಗುಪ್ಪಿ, ಭೀಮಗೌಡ ಪಾಟೀಲ ಕೇರೂರ, ಅಣ್ಣಾಸಾಹೇಬ ಇಂಗಳೆ ಯಕ್ಸಂಬಾ, ನಂದಕುಮಾರ ನಾಶಿಪುಡೆ ನೇಜ  ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಿ.ಡಿ.ಗಚ್ಚಿ ಘೋಷಿಸಿದರು. 

 ಸಕ್ಕರೆ ಕಾರ್ಖಾನೆ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಎಲ್ಲ ನಿರ್ದೇಶಕರನ್ನು ಚುನಾವಣಾಧಿಕಾರಿ ಜಿ.ಡಿ.ಗಚ್ಚಿ ಅವರು ಸನ್ಮಾನಿಸಿ ಗೌರವಿಸಿದರು. 

ಬಳಿಕ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಗಡಿ ಭಾಗದ ರೈತರ ಹಿತ ಕಾಪಾಡುವ ಚಿದಾನಂದ ಸಹಕಾರಿ ಸಕ್ಕರೆ ಕಾರ್ಖಾನೆಗೆ ನಾಲ್ಕು ಬಾರಿ ಅವಿರೋಧವಾಗಿ ನಿರ್ದೇಶಕ ಮಂಡಳಿ ಆಯ್ಕೆಯಾಗಿ ಕಾರ್ಖಾನೆಯ ಪ್ರಗತಿಗೆ ಸಹಕಾರಿಯಾಗಿದೆ. 2500 ರಿಂದ 10 ಸಾವಿರ ಟನ್ ಕಬ್ಬು ನುರಿಸುವ ಈ ಕಾರ್ಖಾನೆ ವರ್ಷದಿಂದ ವರ್ಷಕ್ಕೆ ಪ್ರಗತಿಯಲ್ಲಿ ಸಾಗಿದೆ. ಪೆಟ್ರೋಲ್‌ದಲ್ಲಿ ಇಥಿನಾಲ್ ಮಿಕ್ಸ್‌ ಮಾಡಬೇಕೆಂದು ಕೇಂದ್ರ ಸರ್ಕಾರದ ನಿರ್ದೇಶನದ ಮೇರಿಗೆ ಕಾರ್ಖಾನೆಯು ಇಥಿನಾಲ್ ಘಟಕ ಆರಂಭಿಸಿದೆ. ಸಕ್ಕರೆ ಕಾರ್ಖಾನೆ ಹೆಚ್ಚು ಹೆಚ್ಚು ಬೆಳವಣಿಗೆ ಕಾಣಲು ರೈತರು ಹೆಚ್ಚಿಗೆ ಕಬ್ಬು ಕೊಡಬೇಕು ಎಂದರು. 

ಅಮೀತ ಕೋರೆ ಮಾತನಾಡಿ, ಸಕ್ಕರೆ ಮತ್ತು ಇಥಿನಾಲ್ ಉತ್ಪಾಧನೆಯಲ್ಲಿ ಭಾರತ ಬ್ರೇಜಿಲ್ ಮಾದರಿಯಾಗಬೇಕಿದೆ. ಕೇಂದ್ರ ಸರ್ಕಾರ ಪೆಟ್ರೋಲ್‌ದಲ್ಲಿ ಶೇ 10 ರಷ್ಟ್ರು ಇಥಿನಾಲ್ ಮಿಕ್ಸ್‌ ಮಾಡುವ ಯೋಜನೆ ರೂಪಿಸಿದೆ. ಮುಂದೆ ಶೇ 20 ರಷ್ಟ್ರು ಹೆಚ್ಚಿಗೆ ಮಾಡಿದರೆ ರೈತರಿಗೆ ಹೆಚ್ಚಿನ ದರ ಕೊಡಲು ಸಾಧ್ಯವಾಗುತ್ತದೆ ಎಂದರು. 

ಕಾರ್ಖಾನೆಯು ಪ್ರಸಕ್ತ ಹಂಗಾಮಿನಲ್ಲಿ ಇಲ್ಲಿಯವರೆಗೆ 10,40,993ಟನ್ ಕಬ್ಬು ನುರಿಸಿ 10,72,100ಕ್ವಿಂಟಲ್ ಸಕ್ಕರೆ ಉತ್ಪಾದನೆಮಾಡಿದೆ. ಇದರ ಜೊತೆಗೆ 28.7ಮೆ.ವ್ಯಾಟ್ ಸಾಮರ್ಥ್ಯದ ಸಹವಿದ್ಯುತ್ ಘಟಕ, 30ಕೆಎಲ್‌ಪಿಡಿ ಡಿಸ್ಟಿಲರಿ ಘಟಕಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ. ಈಗಿದ್ದ 30ಕೆಎಲ್‌ಪಿಡಿ ಸಾಮರ್ಥ್ಯದ ಡಿಸ್ಟಿಲರಿ ಘಟಕವನ್ನು 200ಕೆಎಲ್‌ಪಿಡಿ ಸಾಮರ್ಥ್ಯಕ್ಕೆ ವಿಸ್ತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು  ಕಾರ್ಯವು ಪ್ರಗತಿಯಲ್ಲಿದೆ. ರೈತರ ಅಗತ್ಯ ಕೃಷಿ ಸಂಬಂಧಿ ವಸ್ತು ಹಾಗೂ ಸೇವೆಯನ್ನು ಒಂದೆಡೆ ಲಭ್ಯವಾಗಿಸಲು ಕಿಸಾನ ಬಜಾರ್‌ನ್ನು ಪ್ರಾರಂಭಿಸಿದ್ದು ಅಲ್ಲದೇ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಈ ಸಂದರ್ಭದಲ್ಲಿ ಎಲ್ಲ ಅಧಿಕಾರಿವರ್ಗದವರು ಕಾರ್ಮಿಕರು ತಮಗೆ ವಹಿಸಿಕೊಟ್ಟ ಕೆಲಸದ ಜವಾಬ್ದಾರಿ ಅರಿತು ಉತ್ತಮವಾಗಿ ಕೆಲಸ ನಿರ್ವಹಿಸಿ ಕಾರ್ಖಾನೆ ಹಾಗೂ ರಾಷ್ಟ್ರವನ್ನು ಸದೃಢಗೊಳಿಸುವಲ್ಲಿ ತಮ್ಮ ಕೊಡುಗೆ ನೀಡಬೇಕೆಂದು ಕರೆ ನೀಡಿದರು.  

ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿದರು. ಈ ಸಂದರ್ಭದಲ್ಲಿ ಭರತೇಶ ಬನವಣೆ, ಮಲ್ಲಿಕಾರ್ಜುನ ಕೋರೆ, ಅಜೀತ ದೇಸಾಯಿ ಸೇರಿದಂತೆ ಮುಂತಾದವರು ಇದ್ದರು.  ವ್ಯವಸ್ಥಾಪಕ ನಿರ್ದೇಶಕ ಆರ್‌.ಟಿ.ದೇಸಾಯಿ ಸ್ವಾಗತಿಸಿದರು. ಎಸ್‌.ಎಲ್‌.ಹಕಾರೆ ನಿರೂಪಿಸಿದರು. 


ಸುದ್ದಿ ಓದಿ