ಪಡಿತರ ಚೀಟಿಯ ಅಕ್ಕಿ ಅಕ್ರಮ ಸಂಗ್ರಹಣೆ: ಎಸಿ ಶ್ವೇತಾ ಬೀಡೀಕರ ದಾಳಿ
4,14,508 ರೂ. ಬೆಲೆ ಬಾಳುವ 11980 ಕ್ವಿಂಟಲ್ ಅಕ್ರಮ ಅಕ್ಕಿ ವಶ
ಜಮಖಂಡಿ 24: ನಗರದ ವಿಜಯಪೂರ ರಸ್ತೆ ಬಿಸ್ಮಿಲಾ ಖಾನಾವಳಿ ಬಳಿ ಅಕ್ರಮವಾಗಿ ಸಂಗ್ರಹಿಸಿದ ಸರಕಾರದ ವಿವಿಧ ಯೋಜನೆಯಲ್ಲಿ ಹಂಚಿಕೆಯಾದ ಪಡಿತರ ಚೀಟಿಯ ಅಕ್ಕಿಯನ್ನು ಸಂಗ್ರಹಿಸಿದ ಪತ್ರಾಸ ಶೆಡ್ಡನ ಮೇಲೆ ಉಪವಿಭಾಗಾಧಿಕಾರಿ ಶ್ವೇತಾ ಬೀಡೀಕರ ದಾಳಿ ನಡೆಸಿ, 4,14,508 ರೂ. ಬೆಲೆ ಬಾಳುವ 11980 ಕ್ವಿಂಟಲ್ ಅಕ್ರಮ ಅಕ್ಕಿಯ ಮಾಲನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಪಲಾನುಭವಿಗಳಿಗೆ ಹಂಚಿಕೆಯಾದ ಸರಕಾರದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಪಡೆದುಕೊಂಡು, ಸುಮಾರು ಅಕ್ಕಿಯ ಮೂಟೆಗಳು ತುಂಬಿರುವ 50 ಕೆಜಿ ತೂಕದ 161 ಚೀಲಗಳ ಒಟ್ಟು ತೂಕ 8050, 40ರಿಂದ 45 ಕೆಜಿ ತೂಕದ 65 ಚೀಲಗಳ ಒಟ್ಟು ತೂಕ 3770 ಕೆಜಿ, 15ರಿಂದ 20 ಕೆಜಿ ತೂಕದ ಚೀಲಗಳು ಒಟ್ಟು 160 ಕೆಜಿ, ತೂಕ ಎಲ್ಲ ಚೀಲಗಳ ತೂಕ 11980 ಕ್ವಿಂಟಲ್ ಮೂಟೆಯ ಚೀಲಗಳು ಇದ್ದವು. ಸರಕಾರದ ಬೆಲೆಯು ಒಂದು ಕೆಜಿ ಅಕ್ಕಿಗೆ 34.60 ರೂ.ಗಳಂತೆ 4,14,508 ರೂ.ಗಳ ಅಕ್ರಮವಾಗಿ ಸಂಗ್ರಹಿಸಿ ಪಡಿತರ ಅಕ್ಕಿಯನ್ನು ಒಂದು ವಾಹನದಲ್ಲಿ ತುಂಬುವ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ವಿಜಯಪೂರ ಜಿಲ್ಲೆಯ ಕೋಲಾರ ಬಸವರಾಜ ಮುತ್ತಪ್ಪ ವಜ್ರಮಟ್ಟಿ (32) ಕೋಲಾರ ತಾಲೂಕಿನ ಮಟ್ಯಾಳ ಗ್ರಾಮದ ಮಲ್ಲಿಕಾರ್ಜುನ ರಾಚಪ್ಪ ಬಿರಾದರ (35) ಜುಬೇರ, ಜಮಖಂಡಿಯ ಹಾಜೀಲಾಲ ಪೈಲವಾನ ನಾಲ್ಕು ಜನ ಆರೋಪಿತರ ಮೇಲೆ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಆಹಾರ ನೀರೀಕ್ಷಕರಾದ ಸುರೇಶ ದಳವಾಯಿ, ಆನಂದ ರೇವು ರಾಠೋಡ, ಗ್ರಾಮ ಆಡಳಿತಾಧಿಕಾರಿ ಶಿವಶರಣ ಮಾಲಗಾರ, ಕಂದಾಯ ನೀರೀಕ್ಷಕ ಮಂಜುನಾಥ ದೊಡಮನಿ, ಸಿಪಿಐ ಮಲ್ಲಪ್ಪ ಮಡ್ಡಿ ಸೇರಿದಂತೆ ಪೋಲಿಸ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.