ಪ್ಯಾರಾ ಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜ್ಗೆ ಸ್ಫೂರ್ತಿ ಟ್ಯಾಲೆಂಟ್ ಟೆಸ್ಟ್ನಲ್ಲಿ 11 ಮಕ್ಕಳು ಆಯ್ಕೆ
ಗಂಗಾವತಿ 13: ಗಂಗಾವತಿ ನಗರದ ವಿದ್ಯಾನಗರದಲ್ಲಿರುವ ಸ್ಪೂರ್ತಿ ಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ’ಟ್ಯಾಲೆಂಟ್ ಟೆಸ್ಟ್’ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಟ್ಯಾಲೆಂಟ್ ಟೆಸ್ಟ್ ನಲ್ಲಿ ಎಸ್ ಎಸ್ ಎಲ್ ಸಿ ವಿಭಾಗದ 11 ಮಕ್ಕಳು ತೇರ್ಗಡೆ ಯಾಗಿದ್ದಾರೆ.
ಈ ಮಕ್ಕಳಿಗೆ ಎರಡು ಮತ್ತು ಮೂರು ವರ್ಷದ ಮೆಡಿಕಲ್ ಕೋರ್ಸ್ ಉಚಿತವಾಗಿ ನೀಡಲಾಗುತ್ತಿದೆ ಎಂದು ಸ್ಫೂರ್ತಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ: ಬಸವರಾಜ ಸವುಡಿ ತಿಳಿಸಿದ್ದಾರೆ. ಹತ್ತನೇ ತರಗತಿಯ 66 ಮತ್ತು ಪಿಯುಸಿ ಕಲಾವಿಭಾಗದ 62 ವಿದ್ಯಾರ್ಥಿಗಳು, ಪಿಯುಸಿ ವಾಣಿಜ್ಯ ವಿಭಾಗದ 16 ವಿದ್ಯಾರ್ಥಿಗಳು ಮತ್ತು ಪಿಯುಸಿ ಸೈನ್ಸ್ ವಿಭಾಗದ 57 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 201 ಮಕ್ಕಳು ಟ್ಯಾಲೆಂಟ್ ಟೆಸ್ಟ್ ಗೆ ಹಾಜರಾಗಿದ್ದರು, ಇದರಲ್ಲಿ ಒಟ್ಟು 11 ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಆಯ್ಕೆಯಾದ ಮಕ್ಕಳಿಗೆ ಮೂರು ವರ್ಷದ ಅವಧಿಯ ಪ್ಯಾರಾಮೆಡಿಕಲ್ ಕೋರ್ಸ್ ಹಾಗೂ ಪಿಯುಸಿ ಮೇಲೆ ಆಯ್ಕೆಯಾದ ಮಕ್ಕಳಿಗೆ ಎರಡು ವರ್ಷದ ನರ್ಸಿಂಗ್ ಮೆಡಿಕಲ್ ಕೋರ್ಸ್ ಆಡಳಿತ ಮಂಡಳಿ ವತಿಯಿಂದ ಉಚಿತವಾಗಿ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಎಸ್ ಎಸ್ ಎಲ್ ಸಿ ವಿಭಾಗದ ವಿದ್ಯಾರ್ಥಿಗಳಲ್ಲಿ ಪ್ರಥಮ ರಾಂಕ್ ಪಡೆದ ವೈ.ಶ್ರಾವ್ಯ ಗಂಗಾವತಿ,ದ್ವಿತೀಯ ಸ್ಥಾನ ಸೋಹೈಲ್ ಖಾನ್ ಬಸಾಪಟ್ಟಣ, ತೃತೀಯ ಸ್ಥಾನ ಗಣೇಶ್ ಸೂರ್ಯನಾಯಕನ ತಾಂಡ, ನಾಲ್ಕನೇ ಸ್ಥಾನ ಶಿವಪ್ರಸಾದ್ ನವಲಿ, ಐದನೇ ಸ್ಥಾನ ಸಹನಾ ಯರಡೋಣಿ, ಆರನೇ ಸ್ಥಾನ ಪವಿತ್ರ ಕನಕಗಿರಿ, ಅದರಂತೆ ಪಿಯುಸಿಯಲ್ಲಿ ಪ್ರಥಮ ಸ್ಥಾನ ವಿಜಯಲಕ್ಷ್ಮಿ ಹುನಗುಂದ ಪಿಯು ಆರ್ಟ್ಸ್, ದ್ವಿತೀಯ ಸ್ಥಾನ ದೀಪ ಕರಡೋಣ ಪಿಯು ಆರ್ಟ್ಸ್, ತೃತಿಯ ಸ್ಥಾನ ರೇಖಾ ಹಿಟ್ನಾಳ ಪಿಯು ವಾಣಿಜ್ಯ ವಿಭಾಗ, ನಾಲ್ಕನೇ ಸ್ಥಾನ ಸಂಜನಾ ನವಲಿ ಪಿಯು ಸೈನ್ಸ್ ವಿಭಾಗ, ಐದನೇ ಸ್ಥಾನ ಸೌಜನ್ಯ ಕನಕಗಿರಿ ಪಿಯು ಸೈನ್ಸ್ ವಿಭಾಗದಲ್ಲಿ ಟ್ಯಾಲೆಂಟ್ ಟೆಸ್ಟ್ ಪರೀಕ್ಷೆ ಬರೆದು ಉಚಿತವಾಗಿ ಕೋರ್ಸಿಗೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳು ಇದೆ ಮೇ.20 ರೊಳಗೆ ಮೂಲ ದಾಖಲಾತಿಗಳನ್ನು ನೀಡಿ ಪ್ರವೇಶ ಪಡೆದುಕೊಳ್ಳಬೇಕು, ಅವಧಿ ಮುಗಿದ ಬಳಿಕ ಬರುವ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲಾಗದು ಎಂದು ಸಂಸ್ಥೆಯ ಅಧ್ಯಕ್ಷ, ಡಾ: ಬಸವರಾಜ ಸವಡಿ ಹೇಳಿದ್ದಾರೆ.
ಆಯ್ಕೆಯಾದ ಮಕ್ಕಳು ಪ್ರವೇಶ ಪಡೆಯದಿದ್ದರೆ, ಅವರ ಬದಲಾಗಿ ಪಟ್ಟಿಯಲ್ಲಿರುವ ಮುಂದಿನ ವಿದ್ಯಾರ್ಥಿಗೆ ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.