ಯರಗಟ್ಟಿ

ಕರ್ನಾಟಕ ಪಬ್ಲಿಕ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಕರ್ನಾಟಕ ಪಬ್ಲಿಕ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಯರಗಟ್ಟಿ 13: ಸಮೀಪದ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢ ಶಾಲೆ ವಿಭಾಗದ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯ ಫಲಿತಾಂಶ ನೂರಕ್ಕೆ ನೂರರಷ್ಟಾಗಿದೆ.  

ನಂದಾ ಉಜ್ಜಿನಕೊಪ್ಪ 625ಕ್ಕೆ 604 (ಶೇ.97), ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ, ಪ್ರಜ್ವಲ ಸಿಂಗಾರಗೊಪ್ಪ 625ಕ್ಕೆ 549 (ಶೇ.88), ಸುಪ್ರಿಯಾ ನಿಲಾಕಾರಿ 625ಕ್ಕೆ 538 (ಶೇ.86), ಸಂಜನಾ ರಾಯರ 625ಕ್ಕೆ 532 (ಶೇ 85), ಪ್ರಿಯಾಂಕಾ ಹರಳಿ 625ಕ್ಕೆ 529 (ಶೇ. 85), ರತ್ನಾ ಪಾಗಾದ 625ಕ್ಕೆ 529 (ಶೇ. 85) ಅಂಕಗಗಳನ್ನು ಪಡೆದು ಶಾಲೆಗೆ ಕೀರ್ತಿತಂದಿದ್ದಾರೆ. 

ಎಸ್‌. ಎಸ್‌. ಎಸ್‌.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಶಾಲೆಯ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಅಭಿನಂದಿಸಿದ್ದರು. ಈ ವೇಳೆ ಮುಖ್ಯೋಪಾದ್ಯಾಯ ಎಂ. ಕೆ. ಹಾದಿಮನಿ, ಶಿಕ್ಷಕರಾದ ಎಸ್‌. ಪಿ. ಸಿಂಗಾರಗೊಪ್ಪ, ಜಿ. ಬಿ. ಪಾಟೀಲ, ಎ. ಆರ್‌. ಪಾಟೀಲ, ಎಸ್‌ಡಿಎಂಸಿ ಉಪಾಧ್ಯಕ್ಷ ಬಂಗಾರೆಪ್ಪ ಹರಳಿ ಇದ್ದರು. 

ಕನ್ನಡ  ದಿನಪತ್ರಿಕೆಯಲ್ಲಿ ಬರುವ ವಿದ್ಯಾರ್ಥಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಾಹಿತಿ ನನ್ನ ಹಾಗೂ ನನ್ನ ಎಲ್ಲಾ ಸಹಪಾಠಿಗಳಿಗೆ ಓದುವ ಮೂಲಕ ಅಂಕ ಗಳಿಸಲು ಅನಕೂಲವಾಗಿದೆ. ಮುಂದೆ ಬರುವ ವಿದ್ಯಾಥಿಗಳು ಕನ್ನಡ ದಿನಪತ್ರಿಕೆಯಲ್ಲಿ ಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಾಹಿತಿ ಮೂಲಕ ಅತೀ ಹೆಚ್ಚು ಅಂಕಗಳಿಸಲು ಅನಕುಲವಾಗುವುದು ಹಾಗೂ ಕನ್ನಡ ದಿನಪತ್ರಿಕೆ ಓದಲು ಅವಕಾಶ ಕಲ್ಪಿಸಿಕೊಟ್ಟ ಗ್ರಾಮ ಪಂಚಾಯತ ಹಾಗೂ ಅಧ್ಯಕ್ಷರಿಗೆ ಮತ್ತು ಸರ್ವ ಸದಸ್ಯರಿಗೆ, ತಾ. ಪಂ. ಕಾರ್ಯನಿರ್ವಾಹಕಾಧಿಕಾರಿಗಳಿಗೆ ಧನ್ಯವಾದಗಳು. 

ಕುಮಾರಿ ನಂದಾ ಉಜ್ಜಿನಕೊಪ್ಪ 

ವಿದ್ಯಾರ್ಥಿನಿ, ಸತ್ತಿಗೇರಿ. 


ಸುದ್ದಿ ಓದಿ